ಮಂಗಳೂರು: ಗುರುಪುರ ಕೈಕಂಬದಲ್ಲಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆ ಕಾಮಗಾರಿಗೆ ಕೈಕಂಬ ನಾಗರಿಕರ ಹೋರಾಟ ಸಮಿತಿ ವಿರೋಧ ವ್ಯಕ್ತಪಡಿಸಿದೆ.
ಬಿಕರ್ನಕಟ್ಟೆ- ಸಾಣೂರು ರಾಷ್ಟ್ರೀಯ ಹೆದ್ದಾರಿಯ ಗುರುಪುರ ಕೈಕಂಬದಲ್ಲಿ ನಿರ್ಮಾಣವಾಗುತ್ತಿರುವ ಅವೈಜ್ಞಾನಿಕ ಮೇಲ್ಸೇತುವೆ ವಿರುದ್ಧ ಕೈಕಂಬ ನಾಗರಿಕರ ಹೋರಾಟ ಸಮಿತಿ ಕಾಮಗಾರಿ ತೆಡೆದು ಪ್ರತಿಭಟನೆ ನಡೆಸಿದೆ. ಅಲ್ಲದೆ ಗುತ್ತಿದಾರರೊಂದಿಗೆ ವಾಗ್ವಾದ ಕೂಡ ನಡೆಯಿತು.
ಕೈಕಂಬ ಪೇಟೆಯಲ್ಲಿ 2 ಬದಿ ಮುಚ್ಚಿ ಮೇಲ್ಸೇತುವೆ ಮಾಡುವುದು ಸರಿಯಲ್ಲ. ಪಿಲ್ಲರ್ ಬಳಸಿ ಪ್ಲೈ ಓವರ್ ಮಾಡಲಿ ಎಂದು ನಾಗರಿಕರ ಹೋರಾಟ ಸಮಿತಿ ಹೇಳಿದೆ.
ನಾಗರಿಕರ ಹೋರಾಟ ಸಮಿತಿ ಅಧ್ಯಕ್ಷೆ ವಿಜಯ ಗೋಪಾಲ್ ಸುವರ್ಣ ಮಾತನಾಡಿ, ನಾಲ್ಕು ಪಂಚಾಯತ್ ಗಳು ಸಂಗಮವಾಗುವ ಪೇಟೆ ಕೈಕಂಬವಾಗಿದ್ದು, ಎರಡು ಬದಿ ಮುಚ್ಚಿದರೆ ವ್ಯಾಪಾರಿಗಳಿಗೆ, ಜನರಿಗೆ ತುಂಬಾ ತೊದರೆಯಾಗುತ್ತೆ. ಅಧಿಕಾರಿಗಳು ತಕ್ಷಣ ಬಂದು ಕಾಮಗಾರಿ ನಿಲ್ಲಿಸಿ, ನಮಗೆ ಮಾಹಿತಿ ನೀಡಬೇಕೆಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಕೈಕಂಬ ನಾಗರಿಕರ ಹೋರಾಟ ಸಮಿತಿ ಅಧ್ಯಕ್ಷೆ ವಿಜಯ ಜಿ ಸುವರ್ಣ, ಕಾರ್ಯದರ್ಶಿ ಅಶ್ರಫ್ ಅಡ್ಡೂರು ಉಪಾಧ್ಯಕ್ಷರಾದ ಜಾನ್ಸನ್ ವಿಂಟ್ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು