ರಾಜ್ಯಾದ್ಯಂತ ʻಕಾಟೇರʼ ರಿಲೀಸ್: ಡಿ ಬಾಸ್‌ ಅಭಿಮಾನಿಗಳ ಸಂಭ್ರಮ

Prasthutha|

ಚಾಲೆಂಜಿಂಗ್ ಸ್ಟಾರ್​ ದರ್ಶನ್ ಅಭಿನಯದ ಬಹುನಿರೀಕ್ಷಿತ ಕಾಟೇರ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಿದ್ದು, ಸಿನಿಮಾ ಥಿಯೇಟರ್, ಮಾಲ್‌ ಗಳ ಮುಂದೆ ಕಿಕ್ಕಿರಿದು ನಿಂತಿರುವ ಅಭಿಮಾನಿಗಳು ದರ್ಶನ್‌ ಕಟೌಟ್‌ ಗೆ ಹಾರ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ.

- Advertisement -

ದರ್ಶನ್‌ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಕಾಟೇರ ಸಿನಿಮಾ‌ ರಾಜ್ಯದ 21 ಕಡೆ ಮಧ್ಯರಾತ್ರಿ 12 ಗಂಟೆಯಿಂದಲೇ ಶೋ ಆರಂಭಿಸಲಾಗಿದೆ. 43 ಥಿಯೇಟರ್‌ಗಳಲ್ಲಿ ಮುಂಜಾನೆ 3 ಗಂಟೆಯಿಂದ, 77 ಥಿಯೇಟರ್‌ ಗಳಲ್ಲಿ ಬೆಳಗ್ಗಿನ ಜಾವ 4 ಗಂಟೆಯಿಂದ ಶೋ ಆರಂಭವಾಗಿದೆ.

ಜಾತಿ ಹೆಸರಿನಲ್ಲಿ ಶೋಷಣೆ, ರೈತರ ಸಮಸ್ಯೆಗಳು, ಮಾರ್ಯಾದೆಗೇಡು ಹತ್ಯೆ ವಿಚಾರಗಳನ್ನು ಪರಿಣಾಮಕಾರಿಯಾಗಿ ತೋರಿಸಲಾಗಿದೆ. ಮನುಷ್ಯ ಸಂಬಂಧಗಳ ಬಗ್ಗೆಯೂ ಈ ಸಿನಿಮಾ ಮಾತಾಡುತ್ತದೆ.

Join Whatsapp