100 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಕಾಟೇರ’

Prasthutha|

ಬೆಂಗಳೂರು: 2023ರ ಕೊನೆಯಲ್ಲಿ ರಿಲೀಸ್ ಆದ ‘ಕಾಟೇರ’ ಸಿನಿಮಾ ಸೂಪರ್ ಹಿಟ್ ಆಗಿದೆ. ದರ್ಶನ್ ನಟನೆಯ, ತರುಣ್ ಸುಧೀರ್ ನಿರ್ದೇಶನದ ಈ ಸಿನಿಮಾ 104 ಕೋಟಿ ರೂಪಾಯಿ ಬಾಚಿಕೊಂಡಿದೆ.

- Advertisement -

ಈ ಮೂಲಕ ಚಿತ್ರ ಗೆದ್ದು ಬೀಗಿದೆ. ವಾರದ ದಿನಗಳಲ್ಲೂ ಸಿನಿಮಾ ಒಳ್ಳೆಯ ಗಳಿಕೆ ಮಾಡುತ್ತಿದೆ. ಇದನ್ನು ದರ್ಶನ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಈ ಕುರಿತಂತೆ ದರ್ಶನ್ ಅಭಿಮಾನಿಗಳು ಪೋಸ್ಟ್ ಮಾಡಿದ್ದು, ‘ನಮ್ಮ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾದ, ಮತ್ತು ಕರುನಾಡೆ ಮೆಚ್ಚಿದ ನಮ್ಮ ಕಾಟೇರ ಕೇವಲ ಒಂದು ವಾರದಲ್ಲಿ, 52 ಲಕ್ಷಕ್ಕೂ ಅಧಿಕ ಟಿಕೆಟ್ಸ್ ಸೋಲ್ಡ್ ಔಟ್ ಆಗಿ, 104 ಕೋಟಿಗೂ ಅಧಿಕ ಹಣವನ್ನುಗಳಿಸಿ ಎಲ್ಲಾ ದಾಖಲೆಗಳನ್ನು ಮುರಿದು. ಹೊಸ ದಾಖಲೆಯನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ ರಾಜ್ಯದಲ್ಲಿ ಕಾಟೇರ ಹವಾ ಜೋರಾಗಿದೆ. ಕರ್ನಾಟಕದಲ್ಲೇ ಬಾಕ್ಸ್ ಆಫೀಸಿಗೆ ಕೋಟಿ ಕೋಟಿ ರೂಪಾಯಿ ಹಣ ಹರಿದು ಬರುತ್ತಿದೆ. ಜೊತೆಗೆ ನೆರೆಯ ರಾಜ್ಯದಲ್ಲೂ ಕಾಟೇರ ರಿಲೀಸ್ ಆಗಿದ್ದು, ಅಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗೋವಾ, ಆಂಧ್ರಪ್ರದೇಶ, ತಮಿಳು ನಾಡಿನಲ್ಲೂ ಕಾಟೇರ ಬಿಡುಗಡೆ ಆಗಿದ್ದು, ಅಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಥಿಯೇಟರ್ ಆಗಮಿಸಿದ್ದಾರೆ.

Join Whatsapp