ನವದೆಹಲಿ: ಕಾಳಿ ಮಾತೆ ಸಿಗರೇಟು ಸೇದುವುದನ್ನು ಚಿತ್ರಿಸದಂತೆ ಕೋರಿ ಹೂಡಲಾಗಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ದೆಹಲಿ ನ್ಯಾಯಾಲಯ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರಿಗೆ ಸಮನ್ಸ್ ಜಾರಿಗೊಳಿಸಲಾಗಿದೆ.
ಈ ಸಂಬಂಧ ಮಣಿಮೇಕಲೈ ಅವರ ಸಂಸ್ಥೆ, ಟೂರಿಂಗ್ ಟಾಕೀಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್’ಗೆ ಸಮನ್ಸ್ ಮತ್ತು ನೀಡಲಾಗಿದೆ.
ಮಣಿಮೇಕಲೈ ಅವರು ತನ್ನ ಮುಂದಿನ ಸಿನಿಮಾದಲ್ಲಿ ಕಾಳಿಮಾತೆಯನ್ನು ವಿಚಿತ್ರವಾಗಿ ಚಿತ್ರೀಕರಿಸಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಅಡ್ವೋಕೇಟ್ ರಾಜ್ ಗೌರವ್ ಅವರು ನ್ಯಾಯಾಲಯದಲ್ಲಿ ದಾವೆ ಹೂಡಿ, ವಾದ ಮಂಡಿಸಿದ್ದಾರೆ.
ಉತ್ತರ ಪ್ರದೇಶ ಮತ್ತು ದೆಹಲಿ ಪೊಲೀಸರು ಕಳೆದ ವಾರ ಚಲನಚಿತ್ರ ನಿರ್ಮಾಪಕರ ವಿರುದ್ಧ ಐಪಿಸಿ ಸೆಕ್ಷನ್ 153 ಎ, 295 ಎ ಪ್ರಕರಣ ದಾಖಲಿಸಿದ್ದರು.