ಮಂಗಳೂರು: ಮಾಜಿ ಕಾರ್ಪೋರೇಟರ್ , ಕೆಪಿಸಿಸಿ ಸಂಯೋಜಕಿ ಹಾಗೂ ಇತ್ತೀಚೆಗೆ ಟೋಲ್ ವಿರೋಧಿ ಹೋರಾಟ ಸಮಿತಿಯಲ್ಲಿ ಸಕ್ರಿಯವಾಗಿದ್ದ ಪ್ರತಿಭಾ ಕುಳಾಯಿ ಕುರಿತು ಅಶ್ಲೀಲವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ ಕೀರ್ತನ್ ಶೆಟ್ಟಿ ಅಡ್ಯಾರ್ ಎಂಬಾತ ನ್ಯಾಯಾಲಯಕ್ಕೆ ಶರಣಾಗಿದ್ದು, ಪೊಲೀಸರು ಆತನನ್ನು ಕಸ್ಟಡಿಗೆ ಪಡೆದಿದ್ದಾರೆ.
ಟೋಲ್ ವಿರೋಧಿ ಹೋರಾಟ ಸಮಿತಿಯಲ್ಲಿ ಸಕ್ರಿಯವಾಗಿದ್ದ ಪ್ರತಿಭಾ ಕುಳಾಯಿ ಕುರಿತು ಕಹಳೆ ನ್ಯೂಸ್ ಸಂಪಾದಕ ಶ್ಯಾಮ ಸುದರ್ಶನ ಭಟ್ ಹೊಸಮೂಲೆ ಹಾಗೂ ಕೆ.ಆರ್.ಶೆಟ್ಟಿ ಎಂಬವರು ಅಶ್ಲೀಲವಾಗಿ ಪೋಸ್ಟ್ ಮಾಡಿದ್ದರು. ಇದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೆ, ಪ್ರತಿಭಾ ಕುಳಾಯಿ ಪ್ರೆಸ್ ಮೀಟ್ ಕರೆದು ಆಕ್ರೋಶ ವ್ಯಕ್ತಪಡಿಸಿದ್ದರು.