ಕೆ. ಚಂದ್ರಶೇಖರ್ ರಾವ್ BJP ಜತೆಗೆ ಸೇರಲು ಬಯಸಿದ್ದರು: ಮೋದಿ ಸ್ಫೋಟಕ ಹೇಳಿಕೆ

Prasthutha|

ಹೈದರಾಬಾದ್‌: ತೆಲಂಗಾಣ ಸಿಎಂ‌ ಕೆ. ಚಂದ್ರಶೇಖರ್ ರಾವ್ ಬಿಜೆಪಿಯ ಕಡುವೈರಿ ಎಂದು ಜನರ ನಂಬಿಕೆ. ಆದರೆ ಅದೇ ಕೆಸಿಆರ್ ಬಿಜೆಪಿಯ ಜತೆಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದರು ಎಂದರೆ ಅದು ಸ್ಫೋಟಕ ಸುದ್ದಿ. ಪ್ರಧಾನ ಮಂತ್ರಿ ಮೋದಿ, ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್‌ ಬಿಜೆಪಿ ಜತೆ ಮೈತ್ರಿಗೆ ಮುಂದಾಗಿದ್ದರು ಎಂದು ಹೇಳಿದ್ದಾರೆ. ತೆಲಂಗಾಣದ ಮಹಬೂಬಾಬಾದ್‌ ಮತ್ತು ಕರೀಂನಗರಗಳಲ್ಲಿ ಅವರು ಬಿರುಸಿನ ಪ್ರಚಾರ ನಡೆಸುತ್ತಾ ಈ ಹೇಳಿಕೆ ನೀಡಿದ್ದಾರೆ.

- Advertisement -

ಬಿಜೆಪಿಯ ಪ್ರಭಾವ ಹೆಚ್ಚುತ್ತಿರುವುದನ್ನು ಗಮನಿಸಿದ ಕೆಸಿಆರ್‌ ಅವರು ನಮ್ಮ ಪಕ್ಷದ ಜತೆಗೆ ಮೈತ್ರಿಗೆ ಮುಂದಾಗಿದ್ದರು. ಈ ನಿಟ್ಟಿನಲ್ಲಿ ಅವರು ನವದೆಹಲಿಗೆ ಆಗಮಿಸಿ, ನನ್ನ ಜತೆಗೆ ಮಾತುಕತೆ ಕೂಡ ನಡೆಸಿದ್ದರು. ಆದರೆ, ಆ ಪ್ರಸ್ತಾಪ ತಿರಸ್ಕರಿಸಲಾಯಿತು ಎಂದು ಪ್ರಧಾನಿ ಹೇಳಿದ್ದಾರೆ.

Join Whatsapp