ಬಾಬರಿ ಮಸೀದಿ ಭೂ ವಿವಾದ ತೀರ್ಪಿಗೆ ಒಂದು ವರ್ಷ | #JusticeDemolished ಹ್ಯಾಶ್ ಟ್ಯಾಗ್ ನಂ.1 ಟ್ರೆಂಡಿಂಗ್

Prasthutha|

ನವದೆಹಲಿ : ಬಾಬರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದು ಒಂದು ವರ್ಷವಾಗಿರುವ ಹಿನ್ನೆಲೆಯಲ್ಲಿ ಇಂದು ಸಾಮಾಜಿಕ ಜಾಲತಾಣದಲ್ಲಿ #JusticeDemolished ಹ್ಯಾಶ್ ಟ್ಯಾಗ್ ಅಭಿಯಾನ ನಡೆಯುತ್ತಿದೆ. ಟ್ವಿಟರ್ ನಲ್ಲಿ #JusticeDemolished ಹ್ಯಾಶ್ ಟ್ಯಾಗ್ ತುಂಬಾ ಹೊತ್ತಿನಿಂದ ಮೊದಲ ಸ್ಥಾನದಲ್ಲಿ ಟ್ರೆಂಡಿಂಗ್ ನಲ್ಲಿದೆ.

- Advertisement -

ಬಾಬರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿ ಕಳೆದ ವರ್ಷದ ನ.9ರಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ಅನ್ಯಾಯದಿಂದ ಕೂಡಿದೆ ಎಂದು ಪ್ರತಿಪಾದಿಸಿ, ಇಂದು ಮುಂಜಾನೆಯಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪೋಸ್ಟ್ ಗಳು ಹರಿದಾಡುತ್ತಿವೆ. ಅದರಲ್ಲೂ ಟ್ವಿಟರ್ ನಲ್ಲಿ ಅಖಿಲ ಭಾರತ ಮಟ್ಟದಲ್ಲಿ ಈ ಕುರಿತ ಹ್ಯಾಶ್ ಟ್ಯಾಗ್ ತುಂಬಾ ಹೊತ್ತಿನ ವರೆಗೆ ನಂ.1 ಟ್ರೆಂಡಿಂಗ್ ನಲ್ಲಿ ಗುರುತಿಸಲ್ಪಟ್ಟಿದೆ.

ವಿವಿಧ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದು, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮುಖಂಡರೂ, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಬಾಬರಿ ಮಸೀದಿ ಧ್ವಂಸವನ್ನು ನಾವು ಯಾವತ್ತಿಗೂ ಮರೆಯುವುದಿಲ್ಲ ಎಂದು ಸಾವಿರಾರು ಮಂದಿ ಟ್ವೀಟ್ ಮಾಡಿ, ಕೋರ್ಟ್ ತೀರ್ಪಿನ ವಿರುದ್ಧ ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದಾರೆ.

- Advertisement -

1992ರ ಡಿಸೆಂಬರ್ 6ರಂದು ಮಸೀದಿ ಧ್ವಂಸ ಮಾಡಲಾದ ಚಿತ್ರಗಳನ್ನು ಪೋಸ್ಟ್ ಮಾಡಲಾಗಿದೆ. ಅಲ್ಲದೆ, ಕೋರ್ಟ್ ತೀರ್ಪಿನ ಅನ್ಯಾಯವನ್ನು ಪ್ರಶ್ನಿಸಿದ ಸಾಲುಗಳುಳ್ಳ ಪೋಸ್ಟರ್ ಗಳು ವ್ಯಾಪಕವಾಗಿ ಹರಿದಾಡುತ್ತಿವೆ.

ಕಳೆದ ವರ್ಷ ನ.9ರಂದು ನೀಡಲಾದ ತೀರ್ಪಿನಲ್ಲಿ ವಿವಾದಿತ ಜಮೀನಿನ ಸಂಪೂರ್ಣ 2.75 ಎಕರೆ ಭೂ ಪ್ರದೇಶವನ್ನು, ರಾಮ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್ ಒಂದನ್ನು ರಚಿಸಿ ಅದಕ್ಕೆ ಹಸ್ತಾಂತರ ಮಾಡಬೇಕೆಂದು ಆದೇಶಿಸಲಾಗಿತ್ತು. ಅಯೋಧ್ಯೆಯೊಳಗೆ ಮಸೀದಿಗಾಗಿ ಪ್ರತ್ಯೇಕ 5 ಎಕರೆ ಭೂಮಿಯನ್ನು ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಟ್ ಗೆ ಮಂಜೂರು ಮಾಡಬೇಕು ಎಂದು ಆದೇಶಿಸಲಾಗಿತ್ತು.

https://twitter.com/VoiceOfJustic10/status/1325702121912557568
Join Whatsapp