ನವದೆಹಲಿ: ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರನ್ನು ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ನ.9, 2022ರಿಂದ ಚಂದ್ರಚೂಡ್ ಅವರು ಸಿಜೆಐ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ನವೆಂಬರ್ 8ರಂದು ಯು. ಯು. ಲಲಿತ್ ನಿವೃತ್ತರಾಗುತ್ತಿದ್ದಾರೆ. 50ನೇ ಸಿಜೆಐ ಆಗಿ ಚಂದ್ರಚೂಡ್ ಕಾರ್ಯನಿರ್ವಹಿಸಲಿದ್ದಾರೆ.
ಅವರು ಸಿಜೆಐ ಆಗಿ ಎರಡು ವರ್ಷ ಎಂದರೆ 2024ರ ನವೆಂಬರ್ 10ರವರೆಗೆ ಅಧಿಕಾರದಲ್ಲಿ ಇರಲು ಅವಕಾಶವಿದೆ. ಜಸ್ಟಿಸ್ ಚಂದ್ರಚೂಡ್ ಅವರ ಹೆಸರು ಶಿಫಾರಸು ಮಾಡಿ ಇತ್ತೀಚೆಗೆ ಸಿಜೆಐ ಯು. ಯು. ಲಲಿತ್ ಅವರು ಕೇಂದ್ರ ಸರಕಾರಕ್ಕೆ ಪತ್ರ ರವಾನಿಸಿದ್ದರು.