ಭಿಲ್ವಾರಾ: ರಾಜಸ್ಥಾನದ ಜುನೈದ್ ಮತ್ತು ನಾಸಿರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಕುಟುಂಬದ ಓರ್ವ ಸದಸ್ಯನಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿ ಎಸ್’ಡಿಪಿಐ, ಭಾರತ್ ಮುಕ್ತಿ ಮೋರ್ಚಾ, ಬಹುಜನ ಕ್ರಾಂತಿ ಮೋರ್ಚಾ, ರಾಷ್ಟ್ರೀಯ ಮುಸ್ಲಿಂ ಮೋರ್ಚಾ ಒಟ್ಟಾಗಿ ಎಸ್’ಡಿಎಂಗೆ ಮನವಿ ಪತ್ರ ಸಲ್ಲಿಸಿದೆ.
ರಾಜಸ್ಥಾನ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ರಾಜಸ್ಥಾನ ಪೊಲೀಸರು ಇತರ ಆರೋಪಿಗಳನ್ನು ಮತ್ತು ಬಜರಂಗದಳದ ಮೋನು ಮನೇಸರ್ ಎಂಬಾತನನ್ನು ಈ ಪ್ರಕರಣದಲ್ಲಿ ಹೆಸರಿಸಿದ್ದಾರೆ, ಬಜರಂಗದಳದ ಹೆಸರನ್ನು ಸಹ ಎಫ್ಐಆರ್ ನಲ್ಲಿ ದಾಖಲಿಸಲಾಗಿದೆ. ಈ ಹತ್ಯೆಗೆ ಸಂಬಂಧಿಸಿದ ಎಲ್ಲರನ್ನು ಬಂಧಿಸಬೇಕು ಎಂದು ನಿಯೋಗ ಒತ್ತಾಯಿಸಿದೆ.
ಭಿಲ್ವಾರಾದ ಎಲ್ಲಾ ಸಾಮಾಜಿಕ ಸಂಘಟನೆಗಳು ಈ ಹತ್ಯೆಯನ್ನು ಬಲವಾಗಿ ಖಂಡಿಸುತ್ತವೆ. ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಮತ್ತು ಸಂತ್ರಸ್ತರಿಗೆ 1 ಕೋಟಿ ಪರಿಹಾರದ ಜೊತೆಗೆ ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ಉದ್ಯೋಗವನ್ನು ನೀಡಬೇಕು ಎಂದು ಹೇಳಿದೆ.
ಸದರಿ ಪ್ರಕರಣವನ್ನು ಕೇಸ್ ಆಫೀಸರ್ ಬಳಿಗೆ ತೆಗೆದುಕೊಂಡು ಹೋಗಿ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು ಮತ್ತು ಸಾಕ್ಷಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು. ಈ ಭಯಾನಕ ಘಟನೆಯನ್ನು ನಡೆಸಿದ ಎಲ್ಲಾ ಭಯೋತ್ಪಾದಕರನ್ನು ತಕ್ಷಣ ಬಂಧಿಸಬೇಕು. ಗೋರಕ್ಷಣೆಯ ಸೋಗಿನಲ್ಲಿ ಭಯೋತ್ಪಾದನೆಯನ್ನು ಹರಡುವ ಎಲ್ಲಾ ಸಂಘಟನೆಗಳ ಬಗ್ಗೆ ತನಿಖೆ ನಡೆಸಬೇಕು ಮತ್ತು ಈ ಹತ್ಯಾಕಾಂಡದಲ್ಲಿ ಭಾಗಿಯಾಗಿರುವ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಲಾಯಿತು.
ಮುಖಂಡರಾದ ರಾಧೇಶ್ಯಾಮ್ ಎರ್ವಾಲ್, ಪಂಕಜ್ ಜಿ ದಿದ್ವಾನಿಯಾ, ಧನರಾಜ್, ಲಲಿತ್ ಮೀನಾ, ಶಬ್ಬೀರ್ ಖುರೇಷಿ, ಇಕ್ಬಾಲ್ ಮನ್ಸೂರಿ, ಶಿಬ್ಬು ಖಾನ್, ಶಿವ್ ಖೋಯಿವಾಲ್, ರಾಕೇಶ್ ದೇಸಾಯಿ, ನಿರ್ಮಲ್ ಖತಿಕ್, ಶಿವರಾಮ್ ಪಟೇಲ್, ಎಸ್ ಡಿಪಿಐ ಕೌನ್ಸಿಲರ್ ಹಾಜಿ ಸಲೀಂ ಅನ್ಸಾರಿ, ಸೋನು ಪಠಾಣ್, ಅನ್ವರ್ ಮನ್ಸೂರಿ, ಲಾಲ್ ಮುಹಮ್ಮದ್, ಶಂಷಾದ್ ಖಾನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.