ನವದೆಹಲಿ: ‘ಭ್ರಷ್ಟ’, ‘ಶಕುನಿ’, ‘ಸರ್ವಾಧಿಕಾರಿ’ ‘ಕೋವಿಡ್ ಸ್ಪ್ರೆಡರ್’, ‘ಸ್ನೂಪ್ಗೇಟ್’, ‘ನಾಚಿಕೆಯಾಗಬೇಕು’, ‘ದುರುಪಯೋಗಪಡಿಸಿಕೊಂಡ’, ‘ದ್ರೋಹ’, ‘ನಾಟಕ’, ‘ಬೂಟಾಟಿಕೆ’ ‘ಅಸಮರ್ಥ’ ಮೊದಲಾದ ದಿನನಿತ್ಯ ಬಳಸುವ ಅನೇಕ ಪದಗಳು ಅಸಂಸದೀಯವಾಗಿವೆ ಎಂದು ತಿಳಿಸಿದ ಕೇಂದ್ರ ಸರ್ಕಾರ, ಇನ್ನು ಮುಂದಕ್ಕೆ ಇಂತಹ ಪದವನ್ನು ಬಳಸುವಂತಿಲ್ಲ ಸ್ಪಷ್ಟಪಡಿಸಿದೆ.
ಸರ್ಕಾರವನ್ನು ವಿರೋಧಿಸದಂತೆ ಮಾಡಲು ಬೇಕಾಗಿಯೇ ಲೋಕಸಭಾ ಸಚಿವಾಲಯವು ಉಭಯ ಸದನಗಳಿಗೆ ಅಸಂಸದೀಯ ಪದಗಳನ್ನು ಒಳಗೊಂಡ ಹೊಸ ಕಿರುಪುಸ್ತಕವನ್ನೂ ಬಿಡುಗಡೆಗೊಳಿಸಿದೆ.
ಈ ಕಿರುಪುಸ್ತಕದಲ್ಲಿ ಅರಾಜಕತಾವಾದಿ, ಶಕುನಿ, ಸರ್ವಾಧಿಕಾರಿ, ಜೈಚಂದ್, ವಿನಾಶ ಪುರುಷ, ಖಲಿಸ್ತಾನಿ, ಮತ್ತು ರಕ್ತದ ವ್ಯಾಪಾರ ಒಳಗೊಂಡಂತೆ ಇನ್ನು ಅನೇಕ ಪದಗಳನ್ನು ಸದನದ ಚರ್ಚೆ ಸಮಯದಲ್ಲಿ ಅಥವಾ ಇನ್ನಿತರ ರೀತಿಯಲ್ಲಿ ಬಳಕೆ ಮಾಡಿದರೆ ಅವನ್ನು ತೊಡೆದುಹಾಕಲಾಗುವುದು ಎಂದು ತಿಳಿಸಲಾಗಿದೆ ಎನ್ನಲಾಗಿದೆ.
ಅಸಂವಿಧಾನಿಕ ಪದಗಳ ಹೊಸ ಕಿರು ಪುಸ್ತಕ ಬಿಡುಗಡೆಗೊಳಿಸಿದರೂ ರಾಜ್ಯಸಭಾ ಮತ್ತು ಲೋಕಸಭಾ ಸ್ಪೀಕರ್’ಗಳು ಈ ಪದಗಳನ್ನು ತಮ್ಮ ಪೈಲ್’ಗಳಿಂದ ತೆಗೆದು ಹಾಕಬೇಕೆ ಅಥವಾ ಅದು ಬೇಕೆ ಎಂಬುದರ ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ. ಸದ್ಯ ಸರ್ಕಾರದ ಈ ನಿರ್ಧಾರಕ್ಕೆ ವಿಪಕ್ಷಗಳಾದ ಕಾಂಗ್ರೆಸ್, ಟಿಎಂಸಿ ಸೇರಿದಂತೆ ಹಲವು ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.
ಅಸಂಸದೀಯ ಎಂದು ಪಟ್ಟಿಯಲ್ಲಿ ಹೇಳಲಾದ ಕೆಲವು ಪದಗಳ ಪಟ್ಟಿ ಇಲ್ಲಿದೆ.
ರಕ್ತಪಾತ, ರಕ್ತಸಿಕ್ತ, ದ್ರೋಹ, ನಾಚಿಕೆ, ದುರುಪಯೋಗ, ಮೋಸ,ಚಮಚಾ, ಚಮಚಾಗಿರಿ, ಚೇಲಾಗಳು, ಬಾಲಿಶ, ಭ್ರಷ್ಟ, ಹೇಡಿ, ಅಪರಾಧ, ಮೊಸಳೆ ಕಣ್ಣೀರು, ಅವಮಾನ, ಕತ್ತೆ, ನಾಟಕ, ಕಣ್ಣೀರು ತೊಳೆಯುವುದು, ಮೀಠಿ, ಗೂಂಡಾಗಿರಿ, ಬೂಟಾಟಿಕೆ, ಅಸಮರ್ಥ, ತಪ್ಪುದಾರಿ, ಸುಳ್ಳು, ಸತ್ಯ, ಅರಾಜಕತಾವಾದಿ, ಗದ್ದರ್, ಗಿರ್ಗಿಟ್, ಗೂಂಡಾಗಳು, ಅಪಮಾನ, ಅಸತ್ಯ,ಅಹಂಕಾರ, , ಕಾಲಾ ದಿನ, ಕಾಲಾ ಬಜಾರಿ, ಖರೀದ್ ಫರೋಖ್ತ್ , ದಂಗಾ, ದಲಾಲ್, ದಾದಾಗಿರಿ, ದೋಹ್ರಾ ಚರಿತ್ರೆ, ಬೇಚಾರ, ಬಾಬ್ಕಟ್, ಲಾಲಿಪಾಪ್, ವಿಶ್ವಾಘಾತ, ಸಂವೇದನ ಹೀನ, ಮೂರ್ಖ, ಮತ್ತು ಲೈಂಗಿಕ ಕಿರುಕುಳ ಇತ್ಯಾದಿ ಒಳಗೊಂಡಿದೆ.