ವಕ್ಫ್ ಮಂಡಳಿಗೆ ನ್ಯಾಯಿಕ ಅಧಿಕಾರ: ಸರ್ಕಾರದ ಧೋರಣೆ ವಿರೋಧಿಸಿ ಮುಸ್ಲಿಮ್ ವಿದ್ವಾಂಸರಿಂದ ಧರಣಿ

Prasthutha|

ಹೈದರಾಬಾದ್: ತೆಲಂಗಾಣ ವಕ್ಫ್ ಬೋರ್ಡ್ಗೆ ನ್ಯಾಯಿಕ ಅಧಿಕಾರ ಮತ್ತು ರಾಜ್ಯದ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಎಸ್ಸಿ ಎಸ್ಟಿ ಮಾದರಿಯಲ್ಲಿ ಸರ್ಕಾರಿ ಉಪ ಯೋಜನೆಗೆ ಒತ್ತಾಯಿಸಿ ನವೆಂಬರ್ 21 ರಂದು ಧರಣಾ ಚೌಕ್ನಲ್ಲಿ “ಮಹಾ ಧರಣಿ” ನಡೆಸಲು ನಿರ್ಧರಿಸಲಾಗಿದೆ.

- Advertisement -

ಕಳೆದ 7 ವರ್ಷಗಳ ಅವಧಿಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವ ಬಗ್ಗೆ ಮುಖ್ಯಮಂತ್ರಿ ಕೆ.ಸಿ.ಆರ್ ಮೇಲೆ ಒತ್ತಡ ಹೇರಲು ಮುಸ್ಲಿಮ್ ರಾಜಕೀಯ ಮುಖಂಡರು, ಬುದ್ಧಿಜೀವಿಗಳು ಮತ್ತು ವೃತ್ತಿಪರರು, ಅಖಿಲ ಭಾರತ ಅಲ್ಪಸಂಖ್ಯಾತ ಸಂಘಟನೆ ಅಧ್ಯಕ್ಷ ಸೈಯ್ಯದ್ ಮುಖ್ತಾರ್ ಹುಸೇನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.

ಹೈದರಾಬಾದ್ ನಲ್ಲಿ ನಡೆದ ದುಂಡುಮೇಜಿನ ಸಭೆಯ ನಂತರ ಮುಸ್ಲಿಮ್ ಮುಖಂಡರು ಈ ನಿರ್ಣಯವನ್ನು ಅಂಗೀಕರಿಸಿದರು. ಮುಖ್ಯಮಂತ್ರಿ ಕೆ.ಸಿ.ಆರ್ ಮುಸ್ಲಿಮರ ಕಲ್ಯಾಣಕ್ಕಾಗಿ ಹಲವು ಭರವಸೆಗಳನ್ನು ನೀಡಿದ್ದರು. ಪ್ರಮುಖವಾಗಿ ಮುಸ್ಲಿಮ್ ಸಮುದಾಯಕ್ಕೆ 12 % ಮೀಸಲಾತಿಯನ್ನು ಒಳಗೊಂಡಿದೆ. ಈ ಭರವಸೆಗಳನ್ನು ಸರ್ಕಾರ ಈಡೇರಿಸದ ಹಿನ್ನೆಲೆಯಲ್ಲಿ ಮುಸ್ಲಿಮರು ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

- Advertisement -

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಿಪಿಐ ಮುಖಂಡ, ರಾಜ್ಯಸಭಾ ಮಾಜಿ ಸಂಸದ ಅಝೀಝ್ ಪಾಷಾ ಮಾತನಾಡುತ್ತಾ ಪ್ರಜಾಪ್ರಭುತ್ವದಲ್ಲಿ ಜನರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರತಿಭಟನೆಯೊಂದೇ ಮಾರ್ಗ. ಮುಖ್ಯಮಂತ್ರಿ ನೀಡಿದ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಐಕ್ಯರಾಗಿ ಪ್ರತಿಭಟನೆಗೆ ಸಜ್ಜಾಗುವಂತೆ ಕರೆ ನೀಡಿದರು.

ಜಹಾಂಗೀರ್ ಪೀರಾನ್ ದರ್ಗಾಕ್ಕೆ 50 ಎಕ್ರೆ ಜಮೀನು ಮಂಜೂರಾತಿಗೆ ಆದೇಶ ನೀಡಲಾಗಿದೆ ಎಂದು ಅವರು ಆರೋಪಿಸಿದರು. ಆದರೆ 50 ಕೋಟಿ ಮಂಜೂರಾದರೂ ಇಲ್ಲಿಯವರೆಗೆ ಕಾಮಗಾರಿ ಆರಂಭವಾಗಿಲ್ಲ ಎಂದು ತಿಳಿಸಿದರು. ವಕ್ಫ್ ಆಸ್ತಿ ಒತ್ತುವರಿ ಕುರಿತು ಸಿಬಿಐ ತನಿಖೆಗೆ ರಾಜ್ಯ ವಕ್ಫ್ ಮಂಡಳಿ ಆದೇಶಿಸಬೇಕು ಎಂದು ಒತ್ತಾಯಿಸಿದರು.

ಇಸ್ಲಾಮಿಕ್ ಸೆಂಟರ್ ಸ್ಥಾಪಿಸಲು 10 ಎಕರೆ ಜಾಗವನ್ನು ಮಂಜೂರು ಮಾಡಲಾಗಿತ್ತು ಆದರೆ ಈ ವಿಷಯವೂ ಬಾಕಿ ಉಳಿದಿದೆ ಎಂದು ಹಾಜರಿದ್ದವರು ಸೂಚಿಸಿದರು.

ಮುಖ್ಯಮಂತ್ರಿಗಳು ವಕ್ಫ್ ಆಸ್ತಿ ಹಿಂಪಡೆಯಲು ಗಂಭೀರ ಕ್ರಮ ಕೈಗೊಳ್ಳಬೇಕು. ವಕ್ಫ್ ಮಂಡಳಿಗೆ ನ್ಯಾಯಾಂಗ ಅಧಿಕಾರ ನೀಡಬೇಕು ಮತ್ತು ರಾಜ್ಯದ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಶ್ರಮಿಸಬೇಕು ಎಂದು ಸಮಾವೇಶದಲ್ಲಿ ಪಾಲ್ಗೊಂಡವರು ಸರ್ಕಾರವನ್ನು ಒತ್ತಾಯಿಸಿದರು.

ಸಭೆಯಲ್ಲಿ ಎಂ.ಎ. ಸಿದ್ದೀಕಿ, ಸನಾವುಲ್ಲಾ ಖಾನ್, ಮಸೂದ್ ಅನ್ಸಾರಿ, ಎಸ್.ಕೆ. ಅಫ್ಝಲುದ್ದೀನ್, ಮುಹಮ್ಮದ್ ಅನ್ವರ್, ಅಬ್ರಾರ್ ಹುಸೇನ್, ಡಾ. ಲುಬ್ನಾ ಸರ್ವತ್ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಕರ್ತರು ಉಪಸ್ಥಿತರಿದ್ದರು.



Join Whatsapp