ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ | ಅರ್ನಾಬ್ ಗೋಸ್ವಾಮಿಗೆ 14 ದಿನಗಳ ನ್ಯಾಯಾಂಗ ಬಂಧನ

Prasthutha|

ಮುಂಬೈ : ಇಂಟಿರಿಯರ್ ವಿನ್ಯಾಸಕಾರ ಮತ್ತು ಅವರ ತಾಯಿಯ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣದಲ್ಲಿ ಬಂಧಿತರಾಗಿರುವ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬುಧವಾರ ರಾತ್ರಿ ವಿಚಾರಣೆ ನಡೆಸಿದ ರಾಯ್ ಗಢ ಮ್ಯಾಜಿಸ್ಟ್ರೇಟ್, ಈ ತೀರ್ಪು ನೀಡಿದ್ದಾರೆ.

ಇಂಟಿರಿಯರ್ ವಿನ್ಯಾಸಕಾರ ಅನ್ವಯ್ ನಾಯ್ಕ್ ಮತ್ತು ಅವರ ತಾಯಿ ಕುಮುದಾ ನಾಯ್ಕ್ ಅವರು 2018ರ ಮೇ 5ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ರಿಪಬ್ಲಿಕ್ ಟಿವಿ ವತಿಯಿಂದ ಪಾವತಿ ಬಾಕಿಯಿದ್ದುದರಿಂದ, ಈ ಸಂಬಂಧಿತ ಸಮಸ್ಯೆಯಲ್ಲಿ ಅನ್ವಯ ನಾಯ್ಕ್ ಮತ್ತು ಅವರ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ.

- Advertisement -

ಈ ಪ್ರಕರಣದ ತನಿಖೆಯನ್ನು ಕಳೆದ ವರ್ಷ ಪೊಲೀಸರು ಮುಕ್ತಾಯಗೊಳಿಸಿದ್ದರು. ಆದರೆ, ಪ್ರಕರಣದ ಮರು ತನಿಖೆಗೆ ಆದೇಶವಿದ್ದುದರಿಂದ, ಪೊಲೀಸರು ನಿನ್ನೆ ಬೆಳಗ್ಗೆ ಗೋಸ್ವಾಮಿ ಅವರನ್ನು ಬಂಧಿಸಿದ್ದರು.  

- Advertisement -