ಬಿಲ್ಕೀಸ್ ಬಾನು ಅತ್ಯಾಚಾರಿಗಳ ಬಿಡುಗಡೆ ಖಂಡಿಸಿದ ಪ್ರಕರಣದ ಶಿಕ್ಷೆ ವಿಧಿಸಿದ ನ್ಯಾಯಾಧೀಶರು

Prasthutha|

►ಈ ತೀರ್ಮಾನ ಯಾರೇ ಕೈಗೊಂಡಿದ್ದರು ಮರುಪರಿಶೀಲಿಸಬೇಕಿದೆ – ನಿವೃತ್ತ ನ್ಯಾ. ಯುಡಿ ಸಾಲ್ವಿ

- Advertisement -

ಮುಂಬೈ: 2002ರ ಗುಜರಾತ್ ಗಲಭೆಯಲ್ಲಿ ಬದುಕುಳಿದ ಮಹಿಳೆ ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರ ಎಸಗಿ ಆಕೆಯ ಕುಟುಂಬದ ಏಳು ಮಂದಿಯನ್ನು ಕೊಂದ ಹನ್ನೊಂದು ಮಂದಿಯನ್ನು ಬಿಡುಗಡೆ ಮಾಡಬಾರದಿತ್ತು ಎಂದು 14 ವರ್ಷಗಳ ಹಿಂದೆ ಈ ಪ್ರಕರಣ ಸಂಬಂಧ ಶಿಕ್ಷೆ ವಿಧಿಸಿದ್ದ ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಅಪರಾಧಿಗಳನ್ನು ಸಿಹಿ-ಮಾಲೆ ಹಾಕಿ ಸ್ವಾಗತಿಸಿರುವುದನ್ನು ಅವರು ಟೀಕಿಸಿದ್ದಾರೆ.

ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಬಾಂಬೆ ಹೈಕೋರ್ಟ್ ನ್ಯಾಯಾಧೀಶರಾಗಿ ನಿವೃತ್ತರಾದ ನ್ಯಾಯಮೂರ್ತಿ ಯುಡಿ ಸಾಲ್ವಿ, “ಈ ನಿರ್ಧಾರವನ್ನು ಯಾರೇ ತೆಗೆದುಕೊಂಡಿದ್ದರೂ, ಅದನ್ನು ಮರುಪರಿಶೀಲಿಸಬೇಕು, ನಾನು ಅಷ್ಟು ಮಾತ್ರ ಹೇಳಬಲ್ಲೆ” ಎಂದಿದ್ದಾರೆ.

- Advertisement -

“ಈ ಪ್ರಕರಣವು ಪ್ರತಿಯೊಂದು ಪ್ರಕ್ರಿಯೆಯ ಮೂಲಕವೇ ಸಾಗಿತ್ತು ಮತ್ತು ಈ 11 ಅಪರಾಧಿಗಳಿಗೆ ಎಲ್ಲಾ ಪುರಾವೆಗಳ ನಂತರ ಜೀವಾವಧಿ ಶಿಕ್ಷೆಯಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಸರ್ಕಾರವು ಆ ಬಳಿಕ ಏನು ಯೋಚಿಸಿದೆ, ಅದು ಪ್ರಶ್ನೆಯಾಗಿದೆ” ಎಂದು ಅವರು ಹೇಳಿದರು.

ಇಂತಹ ಹೀನ ಕೃತ್ಯದಲ್ಲಿ ಭಾಗಿಯಾಗಿ ಶಿಕ್ಷೆಗೊಳಗಾದವರನ್ನು ಬಿಡುಗಡೆ ಮಾಡಿದ್ದು, ಅವರನ್ನು ಸ್ವಾಗತಿಸಿದ್ದು ಹಿಂದುತ್ವಕ್ಕೆ ಶೋಭೆಯೇ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಾಲ್ವಿ, ಇದು ನ್ಯಾಯವ್ಯವಸ್ಥೆಯ ಅಣಕ ಎಂದಿದ್ದಾರೆ.

Join Whatsapp