ಜೆಪಿ ನಡ್ಡಾ ಗೋ ಬ್ಯಾಕ್: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ವಿರುದ್ಧ ಪಾಟ್ನಾದಲ್ಲಿ ಪ್ರತಿಭಟನೆ

Prasthutha|

ಪಾಟ್ನಾ: ಈ ಹಿಂದೊಮ್ಮೆ ಓದಿದ್ದ ಪಾಟ್ನಾ ಕಾಲೇಜಿಗೆ ಬಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ವಿರುದ್ಧ ಅಖಿಲ ಭಾರತ ವಿದ್ಯಾರ್ಥಿಗಳ ಸಂಘ (ಎ.ಐ.ಎಸ್.ಐ) ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

- Advertisement -

2020 ರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹಿಂಪಡೆಯಲು ಮತ್ತು ಪಾಟ್ನಾ ವಿವಿಗೆ ಕೇಂದ್ರ ಸ್ಥಾನಮಾನವನ್ನು ನೀಡುವಂತೆ ಆಗ್ರಹಿಸಿದ ವಿದ್ಯಾರ್ಥಿಗಳು, ಜೆಪಿ ನಡ್ಡಾ ಗೋ ಬ್ಯಾಕ್ ಎಂಬ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಆಕ್ರೋಶಿತ ವಿದ್ಯಾರ್ಥಿಗಳು ನಡ್ಡಾ ಅವರನ್ನು ಸುತ್ತುವರಿದ ಪರಿಣಾಮ ಭದ್ರತಾ ಸಿಬ್ಬಂದಿ ಅವರನ್ನು ಹೊರ ಕಳುಹಿಸಲು ಹರಸಾಹಸ ಪಡಬೇಕಾಯಿತು. ಕಾಲೇಜಿನ ಸೆಮಿನಾರ್ ಹಾಲ್’ನಲ್ಲಿ ಹಳೆ ವಿದ್ಯಾರ್ಥಿಗಳು ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಇಲ್ಲಿಗೆ ಬಂದಿದ್ದರು.

- Advertisement -

ಎ.ಐ.ಎಸ್.ಎ ರಾಜ್ಯ ಘಟಕದ ಜಂಟಿ ಕಾರ್ಯದರ್ಶಿ ಕುಮಾರ್ ದಿವ್ಯಂ ಅವರು ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ದಾ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಈ ಪ್ರತಿಭಟನೆಯು ಪೊಲೀಸರು ಏರ್ಪಡಿಸಿದ ಭದ್ರತೆಯಲ್ಲಿನ ಬೃಹತ್ ಲೋಪ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.
ನಡ್ಡಾ ಅವರನ್ನು ಸುತ್ತುವರಿಯಲು ವಿದ್ಯಾರ್ಥಿಗಳಿಗೆ ಪೊಲೀಸರು ಅವಕಾಶ ನೀಡಿದರು ಎಂದು ಬಿಜೆಪಿ ಮುಖಂಡರು ದೂರಿದ್ದಾರೆ.



Join Whatsapp