ಬೆಂಗಳೂರು: ಪತ್ರಕರ್ತನೋರ್ವ ಶಿರವಸ್ತ್ರ ಧರಿಸಿದ ಪುಟ್ಟ ಬಾಲಕಿಯನ್ನು ಶಾಲಾ ಆವರಣದಲ್ಲಿ ಅಟ್ಟಾಡಿಸಿಕೊಂಡು ಹೋಗಿ ವಿಡಿಯೋ ಮಾಡುತ್ತಿರುವ ಅಮಾನವೀಯ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಪತ್ರಿಕೋದ್ಯಮದ ನೀತಿಶಾಸ್ತ್ರ ಅರಿಯದ ಇಂತಹ ಪತ್ರಕರ್ತರಿಂದಲೇ ಇಂದು ಮಾಧ್ಯಮ ಕ್ಷೇತ್ರ ಹದಗೆಟ್ಟು ಹೋಗಿರುವುದು. ಬಾಲಕಿಯನ್ನು ಭೀತಿಗೆ ತಳ್ಳಿದ ಪತ್ರಕರ್ತನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಹಲವು ಗಣ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.