ಪತ್ರಕರ್ತೆ ಶತಾ ಹಮ್ಮದ್ ಗೆ ಅಂತರಾಷ್ಟ್ರೀಯ ಪತ್ರಿಕೋದ್ಯಮದ ಕರ್ಟ್ ಸ್ಕೋರ್ಕ್ ಪ್ರಶಸ್ತಿ

Prasthutha|

►- ಪೆಲಸ್ತೀನ್ ಮೇಲೆ ಇಸ್ರೇಲಿನ ದಬ್ಬಾಳಿಕೆಯನ್ನು ಅನಾವರಣಗೊಳಿಸಿದ್ದಕ್ಕೆ ಈ ಪ್ರಶಸ್ತಿ

- Advertisement -

ಫೆಲಸ್ತೀನ್: ಮಿಡಲ್ ಈಸ್ಟ್ ಐ (Middle east eye) ಸುದ್ದಿ ಸಂಸ್ಥೆಯ ಪತ್ರಕರ್ತೆ ಪೆಲಸ್ತೀನ್ ಮೂಲದ ಶಾತಾ ಹಮ್ಮದ್ ಅವರಿಗೆ ಅಂತರರಾಷ್ಟ್ರೀಯ ಪತ್ರಿಕೋದ್ಯಮದ ಕರ್ಟ್ ಸ್ಕೋರ್ಕ್ ಪ್ರಶಸ್ತಿ ಲಭಿಸಿದೆ.

ಹಮ್ಮದ್ ಅವರು ಪೆಲಸ್ತೀನಿಯನ್ ನಾಗರಿಕರ ಮೇಲೆ ಇಸ್ರೇಲ್ ನಡೆಸುತ್ತಿರುವ ಅತಿಕ್ರಮಣದ ದಾಳಿಯನ್ನು ಬಿತ್ತರಿಸುವ ಮೂಲಕ ವರದಿಯನ್ನು ಮಾಡಿದ ಕಾರಣಕ್ಕೆ ಈ ಪ್ರಶಸ್ತಿ ಲಭಿಸಿದೆ ಎಂದು ಪ್ರಶಸ್ತಿಯ ಮೂಲಗಳು ತಿಳಿಸಿವೆ.

- Advertisement -

 ಪೆಲಸ್ತೀನಿಯನ್ ಪತ್ರಕರ್ತರು ಅಲ್ಲಿನ ಸ್ಥಿತಿಗತಿಯನ್ನು  ವರದಿ ಮಾಡಲು ಹಲವು ಬಗೆಯ ಕ್ಲಿಷ್ಟಕರ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಶತಾ ಹಮ್ಮದ್ ವರದಿ ಮೂಲಕ ಪೆಲಸ್ತೀನಿಯನ್ ನಿವಾಸಿಗಳಿಗೆ ವರದಿ ಶಕ್ತಿಯನ್ನು ತುಂಬಿದ್ದಾರೆ ಇಂಟರ್‌ನ್ಯೂಸ್ ಯೂರೋಪ್‌ ಇದರ ಸಿಇಒ ಮತ್ತು ತೀರ್ಪುಗಾರರಲ್ಲಿ ಒಬ್ಬರಾದ ಮೀರಾ ಸೆಲ್ವಾ ಹೇಳಿದ್ದಾರೆ.

ಪ್ರಶಸ್ತಿಯನ್ನು ಸ್ವೀಕರಿಸಿ ಪ್ರತಿಕ್ರಿಯಿಸಿದ ಹಮ್ಮದ್ ‘ಈ ಪ್ರಶಸ್ತಿಯು ನನಗೆ ಪತ್ರಿಕೋದ್ಯಮವನ್ನು ಇನ್ನೂ ಧೈರ್ಯದಿಂದ ಮುಂದುವರಿಸಲು ಭರವಸೆ ಮತ್ತು ಪ್ರೇರಣೆ ನೀಡಿದಂತೆ’ ಎಂದು ಹೇಳಿದ್ದಾರೆ.

ನಾನು ಪೆಲಸ್ತೀನಿಯನ್ನರ ಸಂಕಷ್ಟದ ಜೀವನದ ಆಗು ಹೋಗುಗುಳನ್ನು ಬಿತ್ತರಿಸುತ್ತಿದ್ದೆ. ನಿಜಕ್ಕೂ ಈ ಪ್ರಶಸ್ತಿಯನ್ನು ಸ್ವೀಕರಿಸಲು ತುಂಬಾ ಸಂತಸವಾಗುತ್ತಿದೆ. ಧನ್ಯವಾದಗಳು ಎಂದಿದ್ದಾರೆ.

2000 ರ ಮೇ ತಿಂಗಳಲ್ಲಿ ಸಿಯೆರಾ ಲಿಯೋನ್‌ನಲ್ಲಿ ರಾಯಿಟರ್ಸ್‌ ಪ್ರತಿನಿಧಿಯಾಗಿ ವರದಿ ಮಾಡುವ ಸಂದರ್ಭದಲ್ಲಿ ಕೊಲ್ಲಲ್ಪಟ್ಟ ಅಮೆರಿಕನ್ ಪತ್ರಕರ್ತ ಕರ್ಟ್ ಸ್ಕೋರ್ಕ್ ಅವರ ಸ್ಮರಣಾರ್ಥವಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.



Join Whatsapp