ಪತ್ರಕರ್ತ ಸಜಾದ್ ಗುಲ್ ಪಿ.ಎಸ್.ಎ ಕಾಯ್ದೆ ಅಡಿಯಲ್ಲಿ ಬಂಧನ । ಕೊಟ್ಬಲ್ವಾಲ್ ಜೈಲಿಗೆ ಸ್ಥಳಾಂತರ

Prasthutha|

ನವದೆಹಲಿ: ಪತ್ರಕರ್ತ ಸಜಾದ್ ಗುಲ್ ಅವರನ್ನು ಸಾರ್ವಜನಿಕ ಸುರಕ್ಷಿತಾ ಕಾಯ್ದೆ (ಪಿ.ಎಸ್.ಎ) ಅಡಿಯಲ್ಲಿ ಬಂಧಿಸಿ ಜಮ್ಮುವಿನ ಕೋಟ್ ಭಲ್ವಾಲ್ ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಕಾಶ್ಮೀರ ವಲಯದ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ವಿಜಯ್ ಕುಮಾರ್ ಅವರು ಭಾನುವಾರ ಗುಲ್ ವಿರುದ್ಧ ಪಿ.ಎಸ್.ಎ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಕಳೆದ ಡಿಸೆಂಬರ್ ನಿಂದ ಕಾಶ್ಮೀರ ವಾಲಾ ಎಂಬ ಪತ್ರಿಕೆಯಲ್ಲಿ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಗುಲ್ ಅವರನ್ನು ಬಂಡಿಪೋರಾ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.

- Advertisement -

ಪಾಕಿಸ್ತಾನದ ಮೂಲದ ಏಜೆನ್ಸಿಗಳಿಗೆ ಬೇಹುಗಾರಿಕೆ ಮತ್ತು ಮಾರ್ಗದರ್ಶನ ಕುರಿತ ಮಾಹಿತಿಯನ್ನು ಪ್ರಸಾರ ಮಾಡಿದ ನೆಪದಲ್ಲಿ ಕಾಶ್ಮೀರ ಪೊಲೀಸರು ರಾಷ್ಟ್ರೀಯ ಹಿತಾಸಕ್ತಿಗಳ ವಿರುದ್ಧ ಆರೋಪ ಹೊರಿಸಿ ಪ್ರಕರಣ ದಾಖಲಿಸಿದ್ದರು.

ಈ ಮಧ್ಯೆ ಜನವರಿ ಆರಂಭದಲ್ಲಿ ಗುಲ್ ವಿರುದ್ಧ ಐಪಿಸಿ ಸೆಕ್ಷನ್ 153 ಬಿ, 147, 148, 149, 307 ಅಡಿಯಲ್ಲಿ ಮತ್ತೊಂದು ಪ್ರಕರಣ ದಾಖಲಿಸಲಾಗಿತ್ತು.

ಈ ಸಂಬಂಧ ಜನವರಿ 6 ರಂದು ಗುಲ್ ಅವರನ್ನು ಪೊಲೀಸರು ಬಂಧಿಸಿದ್ದರು. ಇವರ ಬಂಧನವನ್ನು ವಿರೋಧಿಸಿ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.



Join Whatsapp