ನವದೆಹಲಿ: ‘2023ರ ಫ್ರೀಡಂ ಆಫ್ ಎಕ್ಸ್ ಪ್ರೆಶನ್ ಅವಾರ್ಡ್’ನ್ನು ಆಲ್ಟ್ ನ್ಯೂಸ್ ಸಹ-ಸ್ಥಾಪಕ ಮುಹಮ್ಮದ್ ಝುಬೇರ್ ಅವರಿಗೆ ನೀಡಲಾಗಿದೆ.
ಈ ಬಗ್ಗೆ ಮಾತನಾಡಿದ ಝುಬೇರ್, ತಮಗೆ ದೊರೆತ ಈ ಗೌರವವು ತಮ್ಮ ಯುವ ಸಹೋದ್ಯೋಗಿಗಳಿಗೆ ಆಶಾಕಿರಣವಾಗಲಿದೆ ಎಂದು ಹೇಳಿದ್ದಾರೆ.
ಈ ಪ್ರಶಸ್ತಿಯನ್ನು ಪತ್ರಿಕೋದ್ಯಮ ಕ್ಷೇತ್ರದವರಿಗೆ ಇಂಡೆಕ್ಸ್ ಆನ್ ಸೆನ್ಸಾರ್ ಶಿಪ್ ನೀಡುತ್ತದೆ. ಇದು ಲಂಡನ್ ಮೂಲದ ಲಾಭೋದ್ದೇಶ ರಹಿತ ಸಂಸ್ಥೆಯಾಗಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯದ ಉದ್ದೇಶಗಳಿಗಾಗಿ ಹೋರಾಡುತ್ತಿದೆ.