ಜೈಲಿನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಚೀನಾದ ಕೋವಿಡ್ ಪ್ರಕರಣ ವರದಿ ಮಾಡಿದ್ದ ಪತ್ರಕರ್ತೆ

Prasthutha|

ಪತ್ರಕರ್ತೆಯ ಬಿಡುಗಡೆಗೆ ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಒತ್ತಾಯ

- Advertisement -

ಬೀಜಿಂಗ್: ಚೀನಾದಲ್ಲಿ ಕೋವಿಡ್ ಹರಡುತ್ತಿರುವ ಬಗ್ಗೆ ವರದಿ ಮಾಡಿದ್ದ ಪತ್ರಕರ್ತೆಯೊಬ್ಬರು ಜೈಲಿನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪತ್ರಕರ್ತೆ ಜಾಂಗ್ ಶಾನ್ ಸ್ಥಿತಿ ಗಂಭೀರವಾಗಿದೆ. ಕಳೆದ ಫೆಬ್ರವರಿಯಲ್ಲಿ ವುಹಾನ್ ಗೆ ಆಗಮಿಸಿದ ಪತ್ರಕರ್ತೆ ನಗರದಲ್ಲಿ ಕೋವಿಡ್ ಕುರಿತು ವರದಿ ಮಾಡಿದ್ದರು. ನಂತರ ಅವರನ್ನು ಉದ್ದೇಶಪೂರ್ವಕವಾಗಿ ಸಮಸ್ಯೆ ಸೃಷ್ಠಿಸಲು ಯತ್ನಿಸಿದ ಆರೋಪದ ಮೇಲೆ ಚೀನಾ ಪೊಲೀಸರು ಮೇ 2020 ರಲ್ಲಿ ಬಂಧಿಸಿದ್ದರು.

- Advertisement -

ಜಾಂಗ್ ಶಾನ್ ಸಾಕಷ್ಟು ತೂಕವನ್ನು ಕಳೆದುಕೊಂಡಿದ್ದಾಳೆ. ಅವಳ ಆರೋಗ್ಯ ತೀವ್ರ ಹದಗೆಟ್ಟಿದೆ ಅವರ ಸಹೋದರ ಟ್ವೀಟ್‌ ಮಾಡಿದ್ದಾರೆ. ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಕೂಡ ಪತ್ರಕರ್ತೆಯ ಬಿಡುಗಡೆಗೆ ಒತ್ತಾಯಿಸಿದೆ. ಪತ್ರಕರ್ತೆಯನ್ನು ಬಿಡುಗಡೆಗೊಳಿಸಿದರೆ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಬಹುದೆಂದು ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಹೇಳಿದೆ.

Join Whatsapp