ಆಮ್ಮಾನ್: ಈಗಾಗಲೇ ಗಾಝಾದಲ್ಲಿ ಆಸ್ಪತ್ರೆಯನ್ನು ನಿರ್ಮಿಸಿ ಜನರ ಸೇವೆಗೈಯುತ್ತಿರುವ ಜೋರ್ಡನ್ ಗಾಝಾ ಪಟ್ಟಿಯಲ್ಲಿ ಎರಡನೇ ಸಂಚಾರಿ ಆಸ್ಪತ್ರೆಯನ್ನು ಸ್ಥಾಪಿಸಲು ತಯಾರಿಯನ್ನು ಬಹುತೇಕ ಪೂರ್ಣಗೊಳಿಸಿದೆ. ದಕ್ಷಿಣ ಗಾಝಾದ ಖಾನ್ ಯೂನಿಸ್ನಲ್ಲಿ ಈ ಸಂಚಾರಿ ಆಸ್ಪತ್ರೆ 48 ಗಂಟೆಯೊಳಗೆ ಸಿದ್ಧವಾಗಲಿದೆ ಎಂದು ನಿನ್ನೆ ಹೇಳಿದ್ದು, 2 ದಿನದೊಳಗೆ 50 ವೈದ್ಯರು ಆಗಮಿಸಲಿದ್ದಾರೆ ಎಂದು ಸರಕಾರಿ ಸ್ವಾಮ್ಯದ ಟಿವಿ ವಾಹಿನಿ ವರದಿ ನಿನ್ನೆ ವರದಿ ಮಾಡಿದೆ. ಈ ಆಸ್ಪತ್ರೆಗೆ ವೈದ್ಯಕೀಯ ಸಾಮಾಗ್ರಿಗಳನ್ನು ಹೊತ್ತುತಂದ 40 ಟ್ರಕ್ಗಳು ಈಗಾಗಲೇ ರಫಾ ಗಡಿದಾಟಿ ತಲುಪಿದೆ ಎಂದು ವರದಿಯಾಗಿದೆ