ಭಾರತದಲ್ಲಿ ಕೋವಿಡ್ ಲಸಿಕೆ ಅನುಮೋದನೆಗಾಗಿ ಹಾಕಿದ ಅರ್ಜಿಯನ್ನು ಹಿಂಪಡೆದ ಜಾನ್ಸನ್ ಆ್ಯಂಡ್ ಜಾನ್ಸನ್

Prasthutha|

ಹೊಸದಿಲ್ಲಿ: ಅಮೆರಿಕ ಮೂಲದ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪೆನಿಯು ಭಾರತದಲ್ಲಿ ಕೋವಿಡ್ ಲಸಿಕೆಯ ಅನುಮೋದನೆಗಾಗಿ ಸಲ್ಲಿಸಿರುವ ಅರ್ಜಿಯನ್ನು ಹಿಂಪಡೆದಿದೆ.

- Advertisement -

ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಮೂಲಗಳು ಈ ಕುರಿತು ಸ್ಪಷ್ಟಪಡಿಸಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಪರವಾನಗಿಗಾಗಿ ಹಾಕಿದ ಅರ್ಜಿಯನ್ನು ಹಿಂಪಡೆಯಲು ಕಾರಣವೇನು ಎಂಬುದನ್ನು ಕಂಪನಿಯು ಸ್ಪಷ್ಟಪಡಿಸಿಲ್ಲ. ಏಪ್ರಿಲ್ ನಲ್ಲಿ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪೆನಿಯು ತಮ್ಮ ಜಾನ್ಸನ್ ಕೋವಿಡ್ ಲಸಿಕೆಯನ್ನು ಪರೀಕ್ಷಿಸಲು ಅನುಮತಿ ಕೋರಿ ಭಾರತೀಯ ಅಧಿಕಾರಿಗಳನ್ನು ಸಂಪರ್ಕಿಸಿತ್ತು. ಜಾನ್ಸನ್ ಲಸಿಕೆ ಜುಲೈ ವೇಳೆಗೆ ಭಾರತಕ್ಕೆ ಬರಲಿದೆ ಎಂದು ಈ ವೇಳೆ ಹೇಳಲಾಗಿತ್ತು.

ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯ ಲಸಿಕೆಯನ್ನು ಕಳೆದ ಫೆಬ್ರವರಿಯಲ್ಲಿ ಅಮೆರಿಕದಲ್ಲಿ ತುರ್ತು ಬಳಕೆಗೆ ಅನುಮೋದಿಸಲಾಗಿತ್ತು. ವಾರಗಳ ನಂತರ ಲಸಿಕೆ ಪಡೆದ ಕೆಲವರ ರಕ್ತ ಹೆಪ್ಪುಗಟ್ಟಿರುವುದು ವರದಿಯಾಗಿತ್ತು.

- Advertisement -

ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನದ ಪ್ರಕಾರ ಜಾನ್ಸನ್ ಲಸಿಕೆ 66 ರಿಂದ 76 ಶೇಕಡಾ ಪರಿಣಾಮಕಾರಿತ್ವವನ್ನು ಹೊಂದಿದೆ.  ಆದರೆ ಕಂಪೆನಿಯು ತಮ್ಮ ಲಸಿಕೆ ಡೆಲ್ಟಾ ವೈರಸ್ ವಿರುದ್ಧ ಪರಿಣಾಮಕಾರಿ ಎಂದು ಹೇಳಿದೆ.  ಪ್ರಸ್ತುತ ಭಾರತದಲ್ಲಿ ಕೋವಿಶೀಲ್ಡ್, ಕೊವ್ಯಾಕ್ಸಿನ್, ಸ್ಪುಟ್ನಿಕ್ ವಿ ಮತ್ತು ಮೊಡೆನಾ ಎಂಬ ನಾಲ್ಕು ಲಸಿಕೆಗಳನ್ನು ಅನುಮೋದಿಸಲಾಗಿದೆ.



Join Whatsapp