ಜೆಎನ್ ಯು ಹಿಂಸಾಚಾರ: ಅಪರಿಚಿತ ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಮೊಕದ್ದಮೆ

Prasthutha|

ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಭಾನುವಾರ ಎಬಿವಿಪಿ ವಿದ್ಯಾರ್ಥಿಗಳು ನಡೆಸಿದ ಗೂಂಡಾಗಿರಿಯಲ್ಲಿ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. 6 ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದರೆ, 50ಕ್ಕೂ ಹೆಚ್ಚು ಜನ ಗಾಯಗೊಂಡಿರುವುದಾಗಿ ಎಡರಂಗದ ಕಾರ್ಯಕರ್ತರು ಆಪಾದಿಸಿದ್ದಾರೆ.

- Advertisement -


ಬಿಜೆಪಿಯ ವಿದ್ಯಾರ್ಥಿ ಸಂಘಟನೆ ಎಬಿವಿಪಿಯ ಅಪರಿಚಿತ ವಿದ್ಯಾರ್ಥಿಗಳ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.
“ಜೆಎನ್ ಯುಎಸ್ ಯು, ಎಸ್ ಎಫ್ ಐ, ಡಿಎಸ್ ಎಫ್, ಎಐಎಸ್ ಎ ವಿದ್ಯಾರ್ಥಿ ಸಂಘಟನೆಗಳವರು ಸೋಮವಾರ ಬೆಳಿಗ್ಗೆ ನಮ್ಮಲ್ಲಿ ದೂರು ಸಲ್ಲಿಸಿದ್ದಾರೆ. ನಾವು ಭಾರತೀಯ ದಂಡ ಸಂಹಿತೆಯ 323, 341, 509, 506ನೇ ವಿಧಿಗಳಡಿ ಉತ್ತರ ವಸಂತ ಕುಂಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ತನಿಖೆ ನಡೆದಿದೆ. ಕ್ರಮಪ್ರಕಾರ ಅಪರಾಧಿಗಳನ್ನು ಹಿಡಿದು ಶಿಕ್ಷಿಸಲಾಗುವುದು ಎಂದು ವಾಯವ್ಯ ದೆಹಲಿಯ ಪೊಲೀಸ್ ಕಮಿಶನರ್ ಮನೋಜ್ ಸಿ. ತಿಳಿಸಿದ್ದಾರೆ.


ಅನಂತರ ಎಬಿವಿಪಿಯವರು ಸಹ ದೂರು ಸಲ್ಲಿಸಿದ್ದಾರೆ. ತುಲನಾತ್ಮಕ ಅಧ್ಯಯನದ ಮೇಲೆ ತಪ್ಪಿತಸ್ಥರನ್ನು ಶಿಕ್ಷಿಸಲಾಗುವುದು ಎಂದು ಸಹ ಅವರು ಹೇಳಿದರು.
ಏಪ್ರಿಲ್ 10ರ ಭಾನುವಾರ ಸಂಜೆ ಏಳೂವರೆ ಗಂಟೆಯ ಬಳಿಕ ಜೆಎನ್ ಯು ಕ್ಯಾಂಪಸ್ ನಲ್ಲಿ ಹಿಂಸಾಚಾರ ಭುಗಿಲೆದ್ದು ಹಲವಾರು ಜನ ಗಾಯಗೊಂಡಿದ್ದಾರೆ. ಎಡ ಕಾರ್ಯಕರ್ತರ 50- 60 ಜನ ಗಾಯಗೊಂಡಿರುವುದಾಗಿ ಹೇಳಿದರೆ, ಎಬಿವಿಪಿಯವರು 8- 10 ಜನ ಗಾಯಗೊಂಡಿರುವುದಾಗಿ ತಿಳಿಸಿದ್ದಾರೆ. ಹಣೆಯಲ್ಲಿ ರಕ್ತ ಸುರಿಸುತ್ತ ಬರುವ ವಿದ್ಯಾರ್ಥಿನಿ, ಬೆನ್ನಿಗೆ ಗಾಯವಾಗಿರುವ ವಿದ್ಯಾರ್ಥಿ, ಕೈಯಲ್ಲಿ ರಕ್ತ ಹರಿಯುತ್ತಿರುವ ವಿದ್ಯಾರ್ಥಿನಿಯ ಫೋಟೋಗಳು ಜಾಲ ತಾಣದಲ್ಲಿ ಹರಿದಾಡಿವೆ.

- Advertisement -


ಕಾವೇರಿ ಹಾಸ್ಟೆಲ್ ಮೆಸ್ ನಲ್ಲಿ ಮಾಂಸಾಹಾರದ ಅಡುಗೆ ಆಗುತ್ತಿರುವುದರ ವಿರುದ್ಧ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ಸದಸ್ಯರು ನುಗ್ಗಿ ಗಲಾಟೆ ಮಾಡಿ ಕಂಡ ಕಂಡವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರತಿ ಭಾನುವಾರ ಎಲ್ಲ ಹಾಸ್ಟೆಲ್ ಗಳಲ್ಲಿ ಮಾಂಸಾಹಾರಿ ಮತ್ತು ಸಸ್ಯಾಹಾರಿ ಅಡುಗೆ ತಯಾರಾಗುತ್ತದೆ. ಕಾವೇರಿ ಹಾಸ್ಟೆಲ್ ಬಳಿ ಎಬಿವಿಪಿಯವರು ಏನೋ ಕಾರ್ಯಕ್ರಮ ಎಂದು ಓಡಾಡುತ್ತಿದ್ದರು. ಆಗ ವಿತರಕ ಅವರಿಗೆ ಕೋಳಿ ನೀಡಲು ಬಂದ. ಆತನನ್ನು ಕೋಳಿ ಮಾಂಸ ನೀಡದಂತೆ ತಡೆದ ಎಬಿವಿಪಿಯವರು ಆತನನ್ನು ಮತ್ತು ಮೆಸ್ ಕಾರ್ಯದರ್ಶಿಯನ್ನು ಪೀಡಿಸಿ ಮುತ್ತಿಗೆ ಹಾಕಿ ಹಲ್ಲೆ ಮಾಡಿದರು ಎಂದು ಹೇಳಲಾಗಿದೆ.


ಇಲ್ಲಿ ಒಂದು ಹವನ ನಡೆಯುತ್ತಿದೆ ಆದ್ದರಿಂದ ಮಾಂಸಾಹಾರದ ಅಡುಗೆ ಮಾಡುವಂತಿಲ್ಲ ಎಂದು ಜೆಎನ್ ಯು ವಿದ್ಯಾರ್ಥಿ ಸಂಘದ ಕೌನ್ಸಿಲರ್ ಅನಘಾ ಪ್ರದೀಪ್ ತಿಳಿಸಿದ್ದಾರೆ’
ಅದೇ ಹಾಸ್ಟೆಲ್ ನಲ್ಲಿ ನಡೆಯುವ ರಾಮ ನವಮಿ ಪೂಜೆಗೆ ಹಲವರು ತಡೆಯೊಡ್ಡಿದರು ಎಂದು ಎಬಿವಿಪಿಯವರು ಆರೋಪಿಸಿದ್ದಾರೆ.
“ಮಾಂಸಾಹಾರ ಒಂದು ವಿಷಯವಲ್ಲ. ಕಾವೇರಿ ಹಾಸ್ಟೆಲ್ ನಲ್ಲಿ ರಾಮ ನವಮಿ ಪೂಜೆಗೆ ಎಡ ಒಲವಿನವರು ಅಡ್ಡಿ ಪಡಿಸಿದ್ದೇ ಗಲಾಟೆಗೆ ಕಾರಣ. ರಾಮ ನವಮಿ ಪೂಜೆ 3 ಗಂಟೆಗೆ ಆರಂಭವಾಗಬೇಕಿತ್ತು. ಗದ್ದಲದಿಂದಾಗಿ ಸಂಜೆ 5 ಗಂಟೆಗೆ ಆರಂಭವಾಯಿತು. ಇಲ್ಲಿ ಇಫ್ತಾರ್ ಕೂಟ ಮತ್ತು ಹವನ್ ಒಟ್ಟಿಗೇ ನಡೆದಿದೆ. ಸಸ್ಯಾಹಾರಿ ಅಡುಗೆಯನ್ನು ಯಾರೂ ವಿರೋಧಿಸಿಲ್ಲ” ಎಂದು ಜೆಎನ್ ಯುನಲ್ಲಿ ಎಬಿವಿಪಿಯ ಕಾರ್ಯದರ್ಶಿ ಆಗಿರುವ ಉಮೇಶ್ ಅಜ್ಮೀರ ಹೇಳಿದ್ದಾರೆ.



Join Whatsapp