1996ರ ಬಳಿಕ JNUಗೆ ಮೊದಲ ದಲಿತ ವಿದ್ಯಾರ್ಥಿ ಅಧ್ಯಕ್ಷ

Prasthutha|

ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘ (ಜೆಎನ್ ಎಸ್ ಯು) ದಲಿತ ಅಧ್ಯಕ್ಷಯೊಬ್ಬರನ್ನು ಆಯ್ಕೆ ಮಾಡಿದೆ. ಇದರೊಂದಿಗೆ ಎರಡೂವರೆ ದಶಕದ ಬಳಿಕ ದಲಿತರೊಬ್ಬರು ಅಧ್ಯಕ್ಷರಾಗಿ ಆಯ್ಕೆಯಾದಂತಾಗಿದೆ.

- Advertisement -

ಜೆಎನ್ ಎಸ್ ಯು ಅಧ್ಯಕ್ಷ ಧನಂಜಯ್ ಬಿಹಾರದ ಗಯಾ ಜಿಲ್ಲೆಯವರು.1996-97ರಲ್ಲಿ ಚುನಾಯಿತರಾಗಿದ್ದ ಬಟ್ಟಿ ಲಾಲ್ ಭೈರ್ವಾ ಅವರ ಬಳಿಕ, ಜೆಎನ್ ಎಸ್ ಯು ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ದಲಿತ ಎಂಬ ಖ್ಯಾತಿ ಅವರದ್ದಾಗಿದೆ.

ತೀವ್ರ ಹಣಾಹಣಿಗೆ ಸಾಕ್ಷಿಯಾದ ಚುನಾವಣೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಎದುರು, ಎಡ ಸಂಘಟನೆಗಳ ಒಕ್ಕೂಟ ಕ್ಲೀನ್ ಸ್ವೀಪ್ ಸಾಧಿಸಿದೆ.

- Advertisement -


ನಾಲ್ಕು ವರ್ಷಗಳ ನಂತರ ನಡೆದ ಚುನಾವಣೆಯಲ್ಲಿ ಜೆಎನ್ ಎಸ್ ಯು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ (ಎಐಎಸ್ ಎ) ಧನಂಜಯ್, ಎಬಿವಿಪಿ ಅಭ್ಯರ್ಥಿ ಉಮೇಶ್ ಸಿ. ಅಜ್ಮೀರಾ ಎದುರು ಗೆಲುವು ಸಾಧಿಸಿದರು. ಧನಂಜಯ್ 2,598 ಮತಗಳನ್ನು ಪಡೆದರೆ, ಉಮೇಶ್ ಗೆ 1,676 ಮತಗಳಷ್ಟೇ ಬಂದವು.

Join Whatsapp