ಜಿನ್ನಾ ಭಾರತವನ್ನು ಒಮ್ಮೆ ವಿಭಜನೆ ಮಾಡಿದರೆ, ಬಿಜೆಪಿ ದೇಶವನ್ನು ಪ್ರತಿದಿನ ವಿಭಜಿಸುತ್ತಿದೆ: ಸಂಜಯ್ ರಾವತ್

Prasthutha|

ಮುಂಬೈ: ಮುಹಮ್ಮದ್ ಅಲಿ ಜಿನ್ನಾ ಅವರು ಪಾಕಿಸ್ತಾನ ರಚನೆಗಾಗಿ ಭಾರತವನ್ನು ಒಮ್ಮೆ ವಿಭಜಿಸಿದರೆ, ಬಿಜೆಪಿ ನಾಯಕರು ತಮ್ಮ ಹೇಳಿಕೆಗಳ ಮೂಲಕ ಹಿಂದೂ – ಮುಸ್ಲಿಮರ ನಡುವೆ ಬಿರುಕು ಮೂಡಿಸಿ ಪ್ರತಿದಿನ ದೇಶವನ್ನು ವಿಭಜಿಸುತ್ತಿದ್ದಾರೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಆರೋಪಿಸಿದ್ದಾರೆ.

- Advertisement -

ವಿದರ್ಭ ಎಂಬಲ್ಲಿ ಶಿವಸೇನೆಯ ವತಿಯಿಂದ ನಡೆಯುವ ಜನಸಂಪರ್ಕ ಕಾರ್ಯಕ್ರಮದ ಪ್ರಯುಕ್ತ ನಾಗ್ಪುರದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾವತ್ ಅವರು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯನ್ನು ಜನಾಬ್ ಸೇನೆ ಎಂದು ಜರಿದ ಬಿಜೆಪಿಯ ನಡೆಯನ್ನು ಖಂಡಿಸಿದ್ದಾರೆ.

ಸುಮಾರು 22 ಕೋಟಿಕೂ ಅಧಿಕ ಮುಸ್ಲಿಮರು ಭಾರತದಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರಲ್ಲಿ ಹೆಚ್ಚಿನವರು ಬಿಜೆಪಿ, ಶಿವಸೇನೆಗೆ ಮತ ಚಲಾಯಿಸಿದ್ದಾರೆ. ಮುಹಮ್ಮದ್ ಅಲಿ ಜಿನ್ನಾ ಅವರು ಒಂದು ಬಾರಿ ಭಾರತವನ್ನು ವಿಭಜಿಸಿದ್ದರು. ಆದರೆ ಬಿಜೆಪಿ ನಾಯಕರು ಪ್ರತಿದಿನ ಹಿಂದೂ – ಮುಸ್ಲಿಮರ ಮಧ್ಯೆ ಬಿರುಕು ಮೂಡಿಸಿ ಭಾರತವನ್ನು ವಿಭಜಿಸುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.

- Advertisement -

ಇತ್ತೀಚಿನ ಬೆಳವಣಿಗೆಯೊಂದರಲ್ಲಿ ಎಂವಿಎ ಪಕ್ಷದೊಂದಿಗೆ ಮೈತ್ರಿಗೆ ಮುಂದಾಗಿದ್ದ AIMIM ಸಂಸದ ಇಂತಿಯಾಝ್ ಜಲೀಲ್ ನಡೆಯನ್ನು ಟೀಕಿಸಿದ್ದ ಬಿಜೆಪಿ ಹಿರಿಯ ಮುಖಂಡ ದೇವೆಂದ್ರ ಫಡ್ನವೀಸ್, ಶಿವಸೇನೆಯನ್ನೂ ತರಾಟೆಗೆ ತೆಗೆದಿದ್ದರು.

ಬಿಜೆಪಿಯ ಟೀಕೆಗೆ ತಿರುಗೇಟು ನೀಡಿದ ರಾವತ್, ಆರೆಸ್ಸೆಸ್ ಸಂಘಟನೆಯು ಮುಸ್ಲಿಮರಿಗಾಗಿ ರಾಷ್ಟ್ರೀಯ ಮುಸ್ಲಿಮ್ ಮಂಚ್ ನಂತಹ ಅನೇಕ ಸಂಘಟನೆಗಳನ್ನು ಹುಟ್ಟು ಹಾಕಿದೆ ಎಂದು ತಿಳಿಸಿದ್ದಾರೆ.




Join Whatsapp