ರಾಂಚಿ: ಜಾರ್ಖಂಡ್ ನಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಸದಸ್ಯತ್ವ ರದ್ದತಿ ಕುರಿತು ತೀವ್ರವಾದ ರಾಜಕೀಯ ಬೆಳವಣಿಗೆ ನಡೆಯುತ್ತಿದೆ. ಈ ಬೆನ್ನಲ್ಲೇ ಸೊರೆನ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಯನ್ಸ್ ಶಾಸಕರು ಶನಿವಾರ ರೆಸಾರ್ಟ್ಗಳಿಗೆ ತೆರಳಿದ್ದಾರೆ.
ಸೊರೆನ್ ಹಾಗೂ ಆಡಳಿತಾರೂಢ ಶಾಸಕರು 3 ಬಸ್ ಗಳಲ್ಲಿ ಕೆಲವು ಅಜ್ಞಾತ ಸ್ಥಳಗಳಿಗೆ ತೆರಳುತ್ತಿರುವುದು ಕಂಡುಬಂದಿದೆ. ರಾಂಚಿಯಿಂದ 40 ಕಿ.ಮೀ ದೂರವಿರುವ ಕುಂತಿ ಜಿಲ್ಲೆಯ ಲಟ್ರಟು ಅಣೆಕಟ್ಟು ಬಳಿಯ ಅತಿಥಿ ಗೃಹಕ್ಕೆ ತೆರಳಿರುವುದಾಗಿ ವರದಿಯಾಗಿದೆ.
ಆಡಳಿತಾರೂಢ ಜೆಎಂಎಂ, ಕಾಂಗ್ರೆಸ್ ಹಾಗೂ ಆರ್ ಜೆಡಿ ಮೈತ್ರಿ ಸರ್ಕಾರದ ಶಾಸಕರು 3 ಬಸ್ ಗಳಲ್ಲಿ ತೆರಳಿರುವುದು ಕಂಡುಬಂದಿದ್ದು, ಅವರಿಗೆ ಭದ್ರತಾ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ.