ಜಾರ್ಖಂಡ್ ರಾಜಕೀಯ ಬಿಕ್ಕಟ್ಟು: ವಿಶ್ವಾಸಮತ ಯಾಚಿಸಲಿರುವ ಸಿಎಂ ಹೇಮಂತ್ ಸೊರೇನ್

Prasthutha|

ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಜಾರ್ಖಂಡ್ ವಿಧಾನಸಭೆ ಅಧಿವೇಶನದಲ್ಲಿ ಸೋಮವಾರ ವಿಶ್ವಾಸಮತ ಯಾಚಿಸಲಿದ್ದಾರೆ.

- Advertisement -

ಜಾರ್ಖಂಡ್ ಸಚಿವ ಸಂಪುಟವು ಸೋಮವಾರ ವಿಶೇಷ ವಿಧಾನಸಭಾ ಅಧಿವೇಶನವನ್ನು ನಡೆಸುವ ಪ್ರಸ್ತಾಪವನ್ನು ಇತ್ತೀಚೆಗೆ ಅನುಮೋದಿಸಿದ ನಂತರ ಅಧಿವೇಶನವನ್ನು ಕರೆಯಲಾಗಿದೆ. ರಾಯ್ಪುರ ರೆಸಾರ್ಟ್ ನಲ್ಲಿ ಉಳಿದುಕೊಂಡಿರುವ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಶಾಸಕರು ಈ ವಿಶೇಷ ಅಧಿವೇಶನದಲ್ಲಿ ಭಾಗವಹಿಸಲು ಭಾನುವಾರ ರಾಂಚಿಗೆ ಹಿಂತಿರುಗಿದರು.

ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮತ್ತು ಅದರ ಮಿತ್ರಪಕ್ಷಗಳು ಕಳೆದ ವಾರ ತಮ್ಮ ಶಾಸಕರನ್ನು ಕಾಂಗ್ರೆಸ್ ಆಡಳಿತವಿರುವ ಛತ್ತೀಸ್ಗಢದ ರೆಸಾರ್ಟ್ ಗೆ ಸ್ಥಳಾಂತರಿಸಿದ್ದವು.

- Advertisement -

ರಾಯ್ಪುರಕ್ಕೆ ಹೋದವರಲ್ಲಿ ಕಾಂಗ್ರೆಸ್ನ ನಾಲ್ವರು ಸಚಿವರು ಮತ್ತು ಜೆಎಂಎಂನ 19 ಶಾಸಕರು ಸೇರಿದಂತೆ 13 ಮಂದಿ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಯ್ಪುರದಿಂದ ಶಾಸಕರು ಹಿಂದಿರುಗಿದ ಕೂಡಲೇ, ಸಿಎಂ ಸೊರೇನ್ ಅವರನ್ನು ಸರ್ಕ್ಯೂಟ್ ಹೌಸ್ ನಲ್ಲಿ ಭೇಟಿಯಾದರು.

ಆಡಳಿತಾರೂಢ ಮೈತ್ರಿಕೂಟವು ಇಂದು ಸದನದಲ್ಲಿ ಸೊರೆನ್ ಪರವಾಗಿ ವಿಶ್ವಾಸಮತ ಯಾಚಿಸಲಿದೆ ಎಂದು ತಿಳಿದು ಬಂದಿದೆ.

Join Whatsapp