ಜಾರ್ಖಂಡ್: ಮುಸ್ಲಿಮ್ ಯುವಕನನ್ನು ತಲೆಕೆಳಗಾಗಿ ನೇತು ಹಾಕಿಸಿ ಮಾರಣಾಂತಿಕ ಹಲ್ಲೆ ನಡೆಸಿದ ಸಂಘಪರಿವಾರ

Prasthutha|

ಗುಂಪು ಹತ್ಯೆ ವಿರೋಧಿ ಕಾಯ್ದೆ ವಿಧಾನಸಭೆಯಲ್ಲಿ ಅಂಗೀಕರಿಸಿದ ಬೆನ್ನಲ್ಲೇ ಕೃತ್ಯ

- Advertisement -

ರಾಂಚಿ: ಇತ್ತೀಚೆಗೆ ಜಾರ್ಖಂಡ್ ನಲ್ಲಿ ಗುಂಪುಹತ್ಯೆ ವಿರೋಧಿ ಕಾಯ್ದೆಯನ್ನು ಅಂಗೀಕರಿಸಿದ ಬೆನ್ನಲ್ಲೇ ಸಂಘಪರಿವಾರದ ಕಾರ್ಯಕರ್ತರ ಗುಂಪೊಂದು ಮುಸ್ಲಿಮ್ ಯುವಕನೊಬ್ಬನನ್ನು ಮಾರಣಾಂತಿಕವಾಗಿ ಹಲ್ಲೆ ನಡೆಸಿ ತಲೆಕೆಳಗಾಗಿ ನೇತುಹಾಕಿದ ಘಟನೆ ನಡೆದಿದೆ.

ಅನ್ಯಧರ್ಮೀಯ ಯುವತಿಯನ್ನು ಪ್ರೀತಿಸಿದ್ದನ್ನೇ ನೆಪವಾಗಿಸಿ ಸಂಘಪರಿವಾರದ ಕಾರ್ಯಕರ್ತರು ಸಾಜಿದ್ ಎಂಬಾತನ ಮೇಲೆ ಈ ರೀತಿಯ ಪೈಶಾಚಿಕತೆ ಮೆರೆದು ಹಲ್ಲೆ ನಡೆಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಯುವಕನ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ ನಂತರ ಮರಕ್ಕೆ ನೇತು ಹಾಕಲಾಗಿದ್ದು, ಪಾದಗಳಲ್ಲಿ ನೇತಾಡುತ್ತಿರುವ ಸಾಜಿದ್ ಈ ವೇಳೆ ನೋವಿನಿಂದ ಕಿರುಚಿ ಬಿಟ್ಟುಬಿಡುವಂತೆ ಅಂಗಲಾಚುತ್ತಿರುವ ದೃಶ್ಯ ಈ ವೀಡಿಯೋದಲ್ಲಿ ಸೆರೆಯಾಗಿದೆ.

- Advertisement -

ಮಾತ್ರವಲ್ಲ ಹಲ್ಲೆ ನಡೆಸುವ ಮುನ್ನ ಯುವಕನ ತಲೆಗೂದಲನ್ನು ಕತ್ತರಿಸಲಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ಜಾರ್ಖಂಡ್ ಸರ್ಕಾರವು ವಿಧಾನಸಭೆಯಲ್ಲಿ ಗುಂಪು ಹಿಂಸಾಚಾರ ಮತ್ತು ಹತ್ಯೆ ತಡೆ ಮಸೂದೆ 2021 ಅನ್ನು ಅಂಗೀಕರಿಸಿದ ಬಳಿಕವೂ ಈ ರೀತಿ ಅಮಾನವೀಯ ಘಟನೆ ಮರುಕಳಿಸುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ಈ ಕಾಯ್ದೆಯು ರಾಜ್ಯದಲ್ಲಿ ಸಾಂವಿಧಾನಿಕ ಹಕ್ಕುಗಳ ಪರಿಣಾಮಕಾಗಿ ರಕ್ಷಣೆ ಮತ್ತು ಗುಂಪು ಹಿಂಸಾಚಾರವನ್ನು ತಡೆಗಟ್ಟುವ ಗುರಿಯನ್ನು ಹೊಂದಿತ್ತು.

ಈ ಮಸೂದೆಯನ್ನು ಬಿಜೆಪಿ ನಾಯಕರು ‘ಜಾರ್ಖಂಡ್ ವಿರೋಧಿ’ ಎಂದು ಟೀಕಿಸಿದ್ದರೂ ಜಾರ್ಖಂಡ್ ನಲ್ಲಿ ಅಂಗೀಕರಿಸಲಾಗಿದ್ದು, ಅಂಕಿತಕ್ಕಾಗಿ ರಾಜ್ಯಪಾಲರಿಗೆ ಕಳುಹಿಸಲಾಗಿದೆ.

Join Whatsapp