ಜಾರ್ಖಂಡ್ । ಮುಸ್ಲಿಮರ ಗುಂಪು ಹತ್ಯೆ; ಆರೋಪಿಗಳಿಗೆ ಹೈಕೋರ್ಟ್ ಜಾಮೀನು

Prasthutha|

ಲತೇಹರ್ (ಜಾರ್ಖಂಡ್): ಜಾರ್ಖಂಡ್ ನ ಲತೇಹರ್ ಎಂಬಲ್ಲಿ ಮುಸ್ಲಿಮ್ ಜಾನುವಾರು ವ್ಯಾಪಾರಿಗಳನ್ನು ಗುಂಪು ಹತ್ಯೆ ನಡೆಸಿದ ಬಳಿಕ ಮರವೊಂದಕ್ಕೆ ನೇತುಹಾಕಿದ ಘಟನೆಗೆ ಸಂಬಂಧಿಸಿದಂತೆ ಬಂಧಿತ ಸಂಘಪರಿವಾರದ ಕಾರ್ಯಕರ್ತರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

- Advertisement -

2018 ರಲ್ಲಿ ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಜಾರ್ಖಂಡ್ ಹೈಕೋರ್ಟ್ ಅಮಾನತುಗೊಳಿಸಿ ಈ ಆದೇಶ ನೀಡಿದೆ.

ಜಾರ್ಖಂಡ್ ನ ಲತೇಹರ್ ನಲ್ಲಿ 12 ವರ್ಷದ ವಿದ್ಯಾರ್ಥಿ ಇಂತಿಯಾಝ್ ಖಾನ್ ಮತ್ತು 32 ವರ್ಷದ ಜಾನುವಾರು ವ್ಯಾಪಾರಿ ಮಝ್ಲೂಮ್ ಅನ್ಸಾರಿ ಎಂಬವರನ್ನು ಮಾರ್ಚ್ 2016 ರಲ್ಲಿ ಅಪಹರಿಸಿದ ಬಳಿಕ ಹೊಡೆದು ಕೊಂದು ಮರಕ್ಕೆ ನೇತು ಹಾಕಲಾಗಿತ್ತು.

- Advertisement -

ಹೈಕೋರ್ಟ್ ಆದೇಶದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಂತ್ರಸ್ತ ಪರ ವಕೀಲರಾದ ನದೀಮ್ ಖಾನ್, ಜಾಮೀನು ಆದೇಶವನ್ನು ಪ್ರಶ್ನಿಸಿ ಸುಪ್ರೀಮ್ ಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.

ಜಾರ್ಖಂಡ್ ಅಸೆಂಬ್ಲಿಯಲ್ಲಿ ಗುಂಪುಹತ್ಯೆ ವಿರೋಧಿ ಮಸೂದೆಯನ್ನು ಮಂಡಿಸಿದ 4 ತಿಂಗಳ ನಂತರ ಹೈಕೋರ್ಟ್‌ ನಿಂದ ಈ ತೀರ್ಪು ಹೊರಬಿದ್ದಿದೆ.



Join Whatsapp