ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ದರ ₹25 ಕಡಿತಗೊಳಿಸಿದ ಜಾರ್ಖಂಡ್ ಸರ್ಕಾರ

Prasthutha|

ರಾಂಚಿ: ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ದರ ₹25ರೂ ಕಡಿತಗೊಳಿಸುವುದಾಗಿ ಜಾರ್ಖಂಡ್ ಸರ್ಕಾರ ಘೋಷಿಸಿದೆ.  

- Advertisement -

ಸಹಾಯಧನ ನೀಡುವ ಮೂಲಕ ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ದರದಲ್ಲಿ ಪ್ರತಿ ಲೀಟರ್‌ಗೆ ₹25ರಷ್ಟು ಕಡಿತ ಮಾಡಲು ನಿರ್ಧರಿಸಲಾಗಿದ್ದು, ದರ ಕಡಿತವು 2022ರ ಜನವರಿ 26ರಿಂದ ಅನ್ವಯವಾಗಲಿದೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಘೋಷಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಜಾರ್ಖಂಡ್ ಮುಖ್ಯಮಂತ್ರಿಗಳ ಕಾರ್ಯಾಲಯ, ‘ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು ಬಡವರು, ಮಧ್ಯಮ ವರ್ಗದ ಜನರು ಹೆಚ್ಚು ತೊಂದರೆಗೀಡಾಗಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರವು ದ್ವಿಚಕ್ರ ವಾಹನಗಳಿಗೆ ಪ್ರತಿ ಲೀಟರ್ ಪೆಟ್ರೋಲ್‌ ದರದಲ್ಲಿ ₹25ರಷ್ಟು ಸಹಾಯಧನ ನೀಡಲು ನಿರ್ಧರಿಸಿದೆ. 2022ರ ಜನವರಿ 26ರಿಂದ ಇದರ ಪ್ರಯೋಜನ ದೊರೆಯಲಿದೆ’ ಎಂದು ತಿಳಿಸಿದೆ.

Join Whatsapp