ಜಾರ್ಖಂಡ್: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ನಾಲ್ವರು ಹಾಲಿ ಶಾಸಕರು ಮತ್ತು ಹಿಂದಿನ ಸರ್ಕಾರದಲ್ಲಿ ಕ್ಯಾಬಿನೆಟ್ ಹುದ್ದೆಗಳನ್ನು ಹೊಂದಿರುವ ಒಟ್ಟು ಐವರು ಬಿಜೆಪಿ ನಾಯಕರ ವಿರುದ್ಧ ಪ್ರಾಥಮಿಕ ತನಿಖೆಗಳನ್ನು ದಾಖಲಿಸುವಂತೆ ಕ್ಯಾಬಿನೆಟ್ ವಿಚಕ್ಷಣಾ ಇಲಾಖೆಗೆ ಆದೇಶಿಸಿದ್ದಾರೆ.
ಅವರಲ್ಲಿ ಚಂದನಕ್ಯರಿಯಿಂದ ಹಾಲಿ ಬಿಜೆಪಿ ಶಾಸಕರಾದ ಅಮರ್ ಕುಮಾರ್ ಬೌರಿ, ಶರತ್ ನಿಂದ ರಣಧೀರ್ ಸಿಂಗ್, ಕೋಡರ್ಮಾದಿಂದ ನೀರಾ ಯಾದವ್ ಮತ್ತು ಖುಂಟಿಯಿಂದ ನೀಲಕಂಠ ಸಿಂಗ್ ಮುಂಡಾ ಸೇರಿದ್ದಾರೆ. ಲೂಯಿಸ್ ಮರಾಂಡಿ ಅವರು ದುಮ್ಕಾದ ಮಾಜಿ ಶಾಸಕರಾಗಿದ್ದಾರೆ. ರಘುಬರ್ ದಾಸ್ ಸರ್ಕಾರದಲ್ಲಿ ಸಚಿವರಾಗಿದ್ದ ಬೌರಿ, ಯಾದವ್, ಮುಂಡಾ, ಸಿಂಗ್ ಮತ್ತು ಮರಾಂಡಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ತನಿಖೆಗೆ ಹೇಮಂತ್ ಸೊರೇನ್ ಈ ವರ್ಷದ ಆರಂಭದಲ್ಲಿ ಆದೇಶಿಸಿದ್ದರು.
ಬಿಜೆಪಿ ನಾಯಕರು ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು. ನಂತರ ಅದನ್ನು ಎಸಿಬಿ ಗೌಪ್ಯವಾಗಿ ಪರಿಶೀಲಿಸಿದೆ. ಅವರ ವಿರುದ್ಧ ಪ್ರಾಥಮಿಕ ವಿಚಾರಣೆಗೆ ಅನುಮತಿ ಕೇಳಲಾಗಿದೆ” ಎಂದು ಪ್ರಕಟಣೆ ತಿಳಿಸಿದೆ