ಜಾರ್ಖಂಡ್ ಸಿಎಂ, ಸಚಿವರು, ಶಾಸಕರ ವೇತನ ಹೆಚ್ಚಳ

Prasthutha|

ನವದೆಹಲಿ: ಜಾರ್ಖಂಡ್ ನಲ್ಲಿ ಮುಖ್ಯಮಂತ್ರಿಗಳ ವೇತನ ಮತ್ತು ಸಂಭಾವನೆಯನ್ನು ಶೇ.25ರಷ್ಟು ಹೆಚ್ಚಿಸಲಾಗಿದ್ದು, ಶಾಸಕರ ವೇತನವನ್ನು ಶೇ.50ರಷ್ಟು ಹೆಚ್ಚಿಸಲಾಗಿದೆ.

- Advertisement -


ಮಂತ್ರಿಗಳ ಸಂಬಳದಲ್ಲಿ ಶೇ. 31ರಷ್ಟು ಹೆಚ್ಚಳ ಮಾಡಲಾಗಿದೆ. ಹೊಸ ಪರಿಷ್ಕರಣೆ ಪ್ರಕಾರ, ಮುಖ್ಯಮಂತ್ರಿಗಳ ಮೂಲ ವೇತನವನ್ನು ಸವಲತ್ತುಗಳು ಮತ್ತು ಭತ್ಯೆಗಳನ್ನು ಹೊರತುಪಡಿಸಿ ತಿಂಗಳಿಗೆ 80,000 ರೂ.ಗಳಿಂದ 1 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.


ಮುಖ್ಯಮಂತ್ರಿಗಳ ಪ್ರದೇಶ ಭತ್ಯೆಯನ್ನು ಮಾಸಿಕ 80,000 ರೂ.ನಿಂದ 95,000 ರೂ.ಗೆ ಮತ್ತು ರಿಫ್ರೆಶ್ಮೆಂಟ್ ಭತ್ಯೆಯನ್ನು 60,000 ರೂ.ನಿಂದ 70,000 ರೂ.ಗೆ ಹೆಚ್ಚಿಸಲಾಗಿದೆ. “ಶಾಸಕರು, ಸಚಿವರು, ಸ್ಪೀಕರ್, ವಿರೋಧ ಪಕ್ಷದ ನಾಯಕ, ಮುಖ್ಯಮಂತ್ರಿ ಮತ್ತು ವಿಧಾನಸಭೆಯ ಅಧಿಕಾರಿಗಳಿಗೆ ವೇತನ, ಭತ್ಯೆಗಳು ಮತ್ತು ಇತರ ಸವಲತ್ತುಗಳ ಹೆಚ್ಚಳಕ್ಕೆ ಸಂಪುಟ ಅನುಮೋದನೆ ನೀಡಿದೆ” ಎಂದು ಸಂಪುಟ ಕಾರ್ಯದರ್ಶಿ ವಂದನಾ ದಾಡೆಲ್ ಅನುಮೋದನೆಯನ್ನು ದೃಢಪಡಿಸಿದ್ದಾರೆ.

- Advertisement -


ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೇನ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದ ಪ್ರಸ್ತಾವನೆಗೆ ಅನುಗುಣವಾಗಿ ಸಚಿವರ ವೇತನವನ್ನು 65,000 ರೂ.ನಿಂದ 85,000 ರೂ.ಗೆ ಮತ್ತು ಶಾಸಕರ ವೇತನವನ್ನು 40,000 ರೂ.ನಿಂದ 60,000 ರೂ.ಗೆ ಏರಿಸಲಾಗಿದೆ. ಅವರು ರೂ. 80,000ದಿಂದ 95,000 ರೂ. ಪ್ರದೇಶ ಭತ್ಯೆಯನ್ನು ಪಡೆಯುತ್ತಾರೆ.


ಜಾರ್ಖಂಡ್ ಸ್ಪೀಕರ್ ಮೂಲ ವೇತನವನ್ನು ಮಾಸಿಕ 78 ಸಾವಿರದಿಂದ 98 ಸಾವಿರಕ್ಕೆ, ಪ್ರತಿಪಕ್ಷ ನಾಯಕರ ಮೂಲ ವೇತನವನ್ನು 65 ಸಾವಿರದಿಂದ 85 ಸಾವಿರಕ್ಕೆ, ಮುಖ್ಯ ಸಚೇತಕರ ವೇತನವನ್ನು 55 ಸಾವಿರದಿಂದ 75 ಸಾವಿರಕ್ಕೆ ಹೆಚ್ಚಿಸಲಾಗಿದೆ. ಶಾಸಕರ ಪ್ರದೇಶ ಭತ್ಯೆಯನ್ನು ಮಾಸಿಕ 65,000 ರೂ.ನಿಂದ 80,000 ರೂ.ಗಳಿಗೆ ಮತ್ತು ಅವರ ಉಪಹಾರ ಭತ್ಯೆಯನ್ನು ತಿಂಗಳಿಗೆ 30,000 ರೂ.ನಿಂದ 40,000 ರೂ.ಗೆ ಹೆಚ್ಚಿಸಲಾಗಿದೆ.



Join Whatsapp