ಜಾರ್ಖಂಡ್: ಜಾರ್ಖಂಡ್ ರಾಜಕೀಯ ಬಿಕ್ಕಟ್ಟು ಹಿನ್ನೆಲೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ವಿಶ್ವಾಸ ಮತಯಾಚನೆ ಮಾಡಿದ್ದಾರೆ.
ಇಂದು ಬಿಜೆಪಿ ಬಹಿಷ್ಕಾರದ ನಡುವೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮಂಡಿಸಿದ ವಿಶ್ವಾಸ ನಿರ್ಣಯಕ್ಕೆ ಜಾರ್ಖಂಡ್ ವಿಧಾನಸಭೆಯಲ್ಲಿ ಗೆಲುವಾಗಿದೆ.
81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಯಲ್ಲಿ ಸಿಎಂ ಹೇಮಂತ್ ಸೊರೇನ್ ಮಂಡಿಸಿದ ವಿಶ್ವಾಸಮತ ಯಾಚನೆಗೆ 48 ಶಾಸಕರು ಮತ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮುಖ್ಯಸ್ಥ ಸೊರೆನ್ ಅವರು ಜೆಎಂಎಂ, ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾ ದಳದ ಆಡಳಿತ ಸಮ್ಮಿಶ್ರಕ್ಕೆ ಸೇರಿದ ಹೆಚ್ಚಿನ ಸಂಖ್ಯೆಯ ಶಾಸಕರೊಂದಿಗೆ ಸದನಕ್ಕೆ ಆಗಮಿಸಿ ವಿಶ್ವಾಸ ಮತಯಾಚನೆ ಮಾಡಿದ್ದಾರೆ.