ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿದ ಜಾರ್ಖಂಡ್ ಸಿಎಂ ಚಂಪೈ ಸೊರೆನ್

Prasthutha|

ಜಾರ್ಖಂಡ್ ನೂತನ ಸಿಎಂ ಚಂಪೈ ಸೊರೆನ್ ಅವರ ಸರ್ಕಾರ ಇಂದು ವಿಧಾನಸಭೆಯಲ್ಲಿ ತನ್ನ ಬಹುಮತವನ್ನು ಸಾಬೀತುಪಡಿಸಿತು.

- Advertisement -


81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಯಲ್ಲಿ ಬಹುಮತಕ್ಕೆ ಬೇಕಾದ ಸಂಖ್ಯೆ 41 ಆಗಿತ್ತು. 81 ಸದಸ್ಯ ಬಲದ ಸದನದಲ್ಲಿ ಆಡಳಿತಾರೂಢ ಮೈತ್ರಿಕೂಟವು 47 ಶಾಸಕರನ್ನು ಹೊಂದಿದೆ. ಇಲ್ಲಿ ಬಹುಮತದ ನಂಬರ್ 41 ಆಗಿದೆ. ಪ್ರಸ್ತುತ 43 ಶಾಸಕರು ಚಂಪೈ ಸೊರೆನ್ ಅವರನ್ನು ಬೆಂಬಲಿಸುತ್ತಿದ್ದಾರೆ. ಬಿಜೆಪಿ 25 ಶಾಸಕರನ್ನು ಹೊಂದಿದೆ. ಜಾರ್ಖಂಡ್ ವಿಧಾನಸಭೆಯಲ್ಲಿ ಚಂಪೈ ಸೊರೆನ್ 47 ಮತಗಳೊಂದಿಗೆ ವಿಶ್ವಾಸ ಮತ ಗೆದ್ದಿದ್ದಾರೆ.

ನಮ್ಮ ಶಾಸಕರು ಒಗ್ಗಟ್ಟಾಗಿದ್ದಾರೆ. ನಮಗೆ 48ರಿಂದ 50 ಶಾಸಕರ ಬೆಂಬಲವಿದೆ ಎಂದು ರಾಜ್ಯ ಸಚಿವ ಅಲಂಗೀರ್ ಆಲಂ ಹೇಳಿದ್ದರು.



Join Whatsapp