ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್’ಗೆ ಮಧ್ಯಂತರ ಜಾಮೀನು

Prasthutha|

ಮುಂಬೈ: ಅಕ್ರಮ ಹಣ ವರ್ಗಾವಣೆ ಆರೋಪವಿರುವ ಪ್ರಕರಣ ಎದುರಿಸುತ್ತಿರುವ ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರಿಗೆ ಕೊನೆಗೂ ಜಾಮೀನು ಲಭಿಸಿದೆ.

- Advertisement -


ಬಾಂಬೆ ಉಚ್ಚ ನ್ಯಾಯಾಲಯವು ನರೇಶ್ ಗೋಯಲ್ ಅವರಿಗೆ ಎರಡು ತಿಂಗಳ ಕಾಲ ಮಧ್ಯಂತರ ಜಾಮೀನು ಒದಗಿಸಿದೆ. ರಿಲಾಯನ್ಸ್ ಆಸ್ಪತ್ರೆಯಲ್ಲಿರುವ ನರೇಶ್ ಗೋಯಲ್ ಕ್ಯಾನ್ಸರ್ ರೋಗಿಯಾಗಿದ್ದು, ವೈದ್ಯಕೀಯ ಮತ್ತು ಮಾನವೀಯತೆಯ ಆಧಾರದ ಮೇಲೆ ಬೇಲ್ ಕೊಡಲಾಗಿದೆ. ಬದಲಾಗಿ ಒಂದು ಲಕ್ಷ ರೂ ಶೂರಿಟಿ ಪಡೆಯಲಾಗಿದೆ. ಜೆಟ್ ಏರ್ವೇಸ್ನ ಸಂಸ್ಥಾಪಕರಾಗಿರುವ ಅವರು ಹಾಗೂ ಪತ್ನಿ ಅನಿತಾ ಇಬ್ಬರೂ ಕೂಡ ಕ್ಯಾನ್ಸರ್ ರೋಗಿಗಳಾಗಿದ್ದಾರೆ.



Join Whatsapp