ಟ್ವಿಟ್ಟರ್ ನಲ್ಲಿ ಯೇಸು, ಜಾರ್ಜ್ ವಾಷಿಂಗ್ಟನ್ ಹೆಸರಿನಲ್ಲಿ ನಕಲಿ ಬ್ಲೂ ಟಿಕ್ ಖಾತೆಗಳು!

Prasthutha|

ವಾಷಿಂಗ್ಟನ್: ಜೀಸಸ್, ಜಾರ್ಜ್ ವಾಷಿಂಗ್ಟನ್ ಸೇರಿದಂತೆ ಅನೇಕ ಪ್ರಮುಖ ವ್ಯಕ್ತಿಗಳ ಹೆಸರಿನಲ್ಲಿ ಟ್ವಿಟ್ಟರ್ ನ ಬ್ಲೂ ಟಿಕ್ ಅನ್ನು ಬಳಸಿ ಖಾತೆ ತೆರೆದಿರುವುದು ಬೆಳಕಿಗೆ ಬಂದಿದೆ.

- Advertisement -


ಎಂಟು ಡಾಲರ್ (644.20 ರೂ.) ಪಾವತಿಸಿದರೆ ಹೈ ಪ್ರೊಫೈಲ್ ಖಾತೆಗಳಿಗೆ ನೀಡಲಾಗುವ ಬ್ಲೂ ಟಿಕ್ ಅನ್ನು ಯಾರಿಗೆ ಬೇಕಾದರೂ ಪಡೆಯಬಹುದು ಎಂಬ ಟ್ವಿಟರ್ ನ ನಿರ್ಧಾರದಿಂದಾಗಿ ಈಗ ಅನೇಕ ಖಾತೆಗಳು ಬ್ಲೂ ಟಿಕ್’ಗಳೊಂದಿಗೆ ಕಾಣಿಸಿಕೊಳ್ಳುತ್ತಿದೆ.


ಇದರಿಂದಾಗಿ ಪ್ರಮುಖ ವ್ಯಕ್ತಿಗಳ ಹೆಸರಿನಲ್ಲಿ ಬ್ಲೂ ಟಿಕ್ ಅನ್ನು ಬಳಸಿ ನಕಲಿ ಖಾತೆಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

- Advertisement -


“ತಿಂಗಳಿಗೆ 8 ಡಾಲರ್ ಶುಲ್ಕ ತೆರುವ ಯಾರು ಬೇಕಾದರೂ ಬ್ಲೂಟಿಕ್ಗೆ ಅಪ್ಲೈ ಮಾಡಬಹುದಾಗಿದೆ. ‘ಬ್ಲೂಟಿಕ್ ಪಡೆದ ಖಾತೆಗಳಿಗೆ ಪ್ರತಿಕ್ರಿಯೆಗಳು, ಉಲ್ಲೇಖಗಳು ಮತ್ತು ಹುಡುಕಾಟಗಳಲ್ಲಿ ಆದ್ಯತೆ ಸಿಗುತ್ತದೆ. ಇಂಥವರಿಗೆ ದೀರ್ಘ ಅವಧಿಯ ವಿಡಿಯೊ/ಆಡಿಯೊ ಪೋಸ್ಟ್ ಮಾಡಲೂ ಅವಕಾಶ ಮಾಡಿಕೊಡಲಾಗುವುದು ಎಂದು ಕಂಪನಿಯ ನೂತನ ಮಾಲೀಕ ಎಲಾನ್ ಮಸ್ಕ್ ತಿಳಿಸಿದ್ದರು.

ಬ್ಲೂ ಟಿಕ್’ಗೆ ಶುಲ್ಕ ಪಾವತಿ ಮಾಡಬೇಕೆಂಬ ಮಸ್ಕ್ ಹೇಳಿಕೆಗೆ ಹಲವರಿಂದ ತೀವ್ರ ವಿರೋಧಗಳು ವ್ಯಕ್ತವಾಗಿದ್ದವು. ನೀವೆಷ್ಟೇ ದೂರಿದರೂ ಟ್ವಿಟರ್ ನಲ್ಲಿ ಬ್ಲೂ ಟಿಕ್ ಪಡೆಯಲು ತಿಂಗಳಿಗೆ 8 ಡಾಲರ್ ಶುಲ್ಕ ಪಾವತಿಸಲೇಬೇಕೆಂದು ಅವರು ಟ್ವೀಟ್ ಮಾಡಿದ್ದಾರೆ.

Join Whatsapp