ಜೆಡಿಎಸ್’ನ 2ನೇ ಪಟ್ಟಿ ಬಿಡುಗಡೆ; ಹಾಸನದಿಂದ ಸ್ವರೂಪ್’ಗೆ ಟಿಕೆಟ್

Prasthutha|

ಬೆಂಗಳೂರು: ವಿಧಾನ ಸಭಾ ಚುನಾವಣೆಗೆ ಜೆಡಿಎಸ್’ನ 2ನೇ ಪಟ್ಟಿ ಬಿಡುಗಡೆಯಾಗಿದ್ದು, ಹಾಸನ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ತಪ್ಪಿದೆ. ಈ ಕ್ಷೇತ್ರದಲ್ಲಿ ಸ್ವರೂಪ್ ಅವರನ್ನು ಕಣಕ್ಕಿಳಿಸಲಾಗಿದೆ.

- Advertisement -


ಜೆಡಿಎಸ್ ಪಕ್ಷದಿಂದ ಹಾಸನ ಕ್ಷೇತ್ರದ ಟಿಕೆಟ್ ವಿಷಯದಲ್ಲಿ ಎಚ್ ಡಿ ರೇವಣ್ಣ ಹಾಗೂ ಕುಮಾರಸ್ವಾಮಿ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿರುವ ಮಧ್ಯೆಯೇ ಶುಕ್ರವಾರ ಹಾಸನ ಕ್ಷೇತ್ರದಲ್ಲಿ ಸ್ಪರ್ಧಿಸಲು ಸ್ವರೂಪ್ ಅವರಿಗೆ ಕುಮಾರಸ್ವಾಮಿ ಬಿಫಾರಂ ನೀಡಿದ್ದಾರೆ. ಇದು ದೇವೇಗೌಡ ಕುಟುಂಬದಲ್ಲಿ ಮತ್ತಷ್ಟು ಶೀತಲ ಸಮರಕ್ಕೆ ಕಾರಣವಾಗಿದೆ.


ಬಸವನಗುಡಿ ಕ್ಷೇತ್ರದ ಅಭ್ಯರ್ಥಿ ಅರಮನೆ ಶಂಕರ್, ಯಾದಗಿರಿ ಜಿಲ್ಲೆ ಶಹಾಪುರ ಕ್ಷೇತ್ರದ ಅಭ್ಯರ್ಥಿ ಗುರುಪಾಟೀಲ್ ಸೇರಿದಂತೆ ಅನೇಕ ಅಭ್ಯರ್ಥಿಗಳಿಗೆ ಬಿ ಫಾರಂ ನೀಡಲಾಗಿದೆ. ಇದೇ ವೇಳೆ ಹಾಸನದ ಅಭ್ಯರ್ಥಿ ಘೋಷಣೆಯಾಗದಿದ್ದರೂ ಸ್ವರೂಪ್ ಗೆ ಬಿ ಫಾರಂ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

Join Whatsapp