ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿ ರಿಲೀಸ್: ಜಿ.ಟಿ ದೇವೇಗೌಡಗೆ ಕೊಕ್, ರೇವಣ್ಣಗೆ ಸ್ಥಾನ

Prasthutha|

ಬೆಂಗಳೂರು: ಇದೇ ನವೆಂಬರ್ 13ರಂದು ರಾಜ್ಯದ ಶಿಗ್ಗಾಂವಿ, ಸಂಡೂರು ಮತ್ತು ಚನ್ನಪಟ್ಟಣ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಭರ್ಜರಿ ಪ್ರಚಾರ ನಡೆಸಲು ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ.

- Advertisement -


40 ಜನರ ಸ್ಟಾರ್ ಪ್ರಚಾರಕ ಪಟ್ಟಿಯನ್ನು ಕೇಂದ್ರ ಸಚಿವರು ಜೆಡಿಎಸ್ ರಾಜ್ಯಾಧ್ಯಕ್ಷರೂ ಆದ ಹೆಚ್.ಡಿ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದು, ಚುನಾವಣಾ ಆಯೋಗಕ್ಕೂ ಪಟ್ಟಿಯನ್ನ ರವಾನೆ ಮಾಡಿದ್ದಾರೆ. ಆದ್ರೆ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ ದೇವೇಗೌಡ ಅವರಿಗೆ ಕೊಕ್ ನೀಡಲಾಗಿದೆ.


ಇತ್ತೀಚೆಗೆ ಮುಡಾ ಪ್ರಕರಣದಲ್ಲಿ ಸಿಎಂ ರಾಜೀನಾಮೆ ನೀಡಬೇಕೆಂಬ ಒತ್ತಾಯದ ವಿಚಾರಕ್ಕೆ ಸಂಬಂಧಿಸಿದಂತೆ ಜಿ.ಟಿ ದೇವೇಗೌಡರು ದಸರಾ ಉದ್ಘಾಟನಾ ವೇದಿಕೆಯಲ್ಲಿ ಮಾತನಾಡಿದ್ದರು. ಕುಮಾರಸ್ವಾಮಿ ವಿರುದ್ಧವೇ ವಾಗ್ದಾಳಿ ನಡೆಸಿದ್ದ ಜಿಟಿ ದೇವೇಗೌಡ ಅವರು ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಉಪಚುನಾವಣೆಗೆ ಸ್ಟಾರ್ ಪ್ರಚಾರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

- Advertisement -


ಪ್ರಮುಖ ಸ್ಟಾರ್ ಪ್ರಚಾರಕರು:
ದೇವೇಗೌಡ – ರಾಷ್ಟ್ರೀಯ ಅಧ್ಯಕ್ಷ
ಕುಮಾರಸ್ವಾಮಿ – ಕೇಂದ್ರ ಸಚಿವ, ರಾಜ್ಯಾಧ್ಯಕ್ಷ.
ಸುರೇಶ್ ಬಾಬು – ಶಾಸಕಾಂಗ ನಾಯಕ
ಅನಿತಾ ಕುಮಾರಸ್ವಾಮಿ – ಮಾಜಿ ಶಾಸಕಿ.
ಸಾ.ರಾ. ಮಹೇಶ್- ಮಾಜಿ ಸಚಿವ
ಪುಟ್ಟರಾಜು – ಮಾಜಿ ಸಚಿವ
ಹರೀಶ್ ಗೌಡ – ಶಾಸಕ, ಜಟಿಡಿ ಪುತ್ರ
ಮಲ್ಲೇಶ್ ಬಾಬು – ಸಂಸದ




Join Whatsapp