ಕುಮಾರಸ್ವಾಮಿ ಕರೆದರೂ ಹಾಸನಾಂಬ ದರ್ಶನಕ್ಕೆ ಗೈರಾದ ಜೆಡಿಎಸ್‌ ಶಾಸಕ: ಆಪರೇಷನ್ ಹಸ್ತದ ಗುಮಾನಿ

Prasthutha|

ಹಾಸನ: 2024 ರ ಲೋಕಸಭಾ ಚುನಾವಣೆಗೆ ಹೈಕಮಾಂಡ್‌ 20 ಕ್ಷೇತ್ರಗಳನ್ನ ಗೆಲ್ಲಲ್ಲು ಟಾರ್ಗೆಟ್‌ ನೀಡಿದ್ದು, ಡಿ ಕೆ ಶಿವಕುಮಾರ್‌ ಜೆಡಿಎಸ್‌ ಶಾಸಕರಿಗೆ ಗಾಳ ಹಾಕುತ್ತಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ದಟ್ಟವಾಗಿ ಕೇಳಿ ಬರುತ್ತಿದೆ. ಇದೇ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಹಾಸನಾಂಬ ದರ್ಶನಕ್ಕೆ ಎಲ್ಲಾ ಜೆಡಿಎಸ್‌ ನಾಯಕರನ ಕರೆದುಕೊಂಡು ಹೋಗಿದ್ದಾರೆ. ಆದರೆ, 19 ಶಾಸಕರ ಪೈಕಿ ಮೈತ್ರಿ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದ ಗುರ್ಮಿಟ್ಕಲ್ ಶಾಸಕ ಶರಣಗೌಡ ಕಂದಕೂರ್ ಗೈರಾಗಿದ್ದಾರೆ. ಇದು ಜೆಡಿಎಸ್ ಶಾಸಕನ ಕಾಂಗ್ರೆಸ್ ಸಖ್ಯದ ಕಾರಣಕ್ಕಾಗಿ ನಡೆದಿದೆಯೇ ಎಂದು ಅನುಮಾನಗಳಿಗೆ ಕಾರಣವಾಗಿದೆ.

- Advertisement -

ಆಡಳಿತಾರೂಢ ಕಾಂಗ್ರೆಸ್‌‌ಗೆ ಲೋಕಸಭಾ ಚುನಾವಣೆಯಲ್ಲಿ ಸೋಲಿನ ರುಚಿ ತೋರಿಸಬೇಕು ಎಂದು ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಯಾಗಿದೆ. ಆದರೆ ಆಪರೇಷನ್‌ ಹಸ್ತದ ಕುರಿತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆತಂಕಿತರಾಗಿದ್ದು, 135 ಶಾಸಕರನ್ನು ಹೊಂದಿದ್ದದೂ ಸಹ ನಮ್ಮ 13 ಜನ ಶಾಸಕರನ್ನ ಸೆಳೆಯಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ ಎಂದು ಹೇಳಿದ್ದರು. 19 ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಅನಿವಾರ್ಯತೆಯಲ್ಲಿರುವ ಕುಮಾರಸ್ವಾಮಿ ತಮ್ಮ ಶಾಸಕರೊಂದಿಗೆ ಹಾಸನದ ಹಾಸನಾಂಬ ದೇವಿಯ ದರ್ಶನಕ್ಕೆ ಎಲ್ಲ ಶಾಸಕರನ್ನು ಕರೆದಿದ್ದರು. ಆದರೆ ಜೆಡಿಎಸ್‌‌ನ 19 ಶಾಸಕರ ಪೈಕಿ ಶರಣಗೌಡ ಕಂದಕೂರ್ ಗೈರಾಗಿದ್ದಾರೆ. ಅವರು ಬಿಜೆಪಿ- ಜೆಡಿಎಸ್ ಮೈತ್ರಿಗೆ ಅಸಮಾಧಾನ ಹೊರಹಾಕಿದ್ದರು ಎಂಬುದು ಗಮನಾರ್ಹ.

ಸೆ.9ರಂದು ಮೊದಲ ಸಲ ಪ್ರತಿಕ್ರಿಯೆ ನೀಡಿದ್ದ ಶಾಸಕ ಕಂದಕೂರ, ಮೈತ್ರಿಗೆ ಇದು ಸಕಾಲವಲ್ಲ. ಹೀಗಾಗಿ ನಾನು ಒಪ್ಪುವುದಿಲ್ಲ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ಆ ಬಳಿಕವೂ ಇದೇ ಮಾತನ್ನು ಪುನರುಚ್ಛರಿಸಿದ್ದರು.

- Advertisement -

ಕಂದಕೂರ್ ಅವರು ನಮಗೆ ಕುಟುಂಬದವರಿದ್ದಂತೆ, ಅವರೊಂದಿಗೆ ಮಾತನಾಡುತ್ತೇನೆ. ಏನೇ ಸಮಸ್ಯೆಗಳಿದ್ದರೂ ಬಗೆಹರಿಸುತ್ತೇನೆ ಎಂದು ಕುಮಾರಸ್ವಾಮಿ ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.



Join Whatsapp