ಇನಾಯತ್ ಅಲಿ ನೇತೃತ್ವದಲ್ಲಿ ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆ

Prasthutha|

ಸುರತ್ಕಲ್: ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರ ಸಭೆಯು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ನೇತೃತ್ವದಲ್ಲಿ ನಡೆಯಿತು.

- Advertisement -

ಸಭೆಯಲ್ಲಿ ಬ್ಲಾಕ್ ವ್ಯಾಪ್ತಿಯ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.

ಜೆಡಿಎಸ್ ಸುರತ್ಕಲ್ ಬ್ಲಾಕ್ ಅಧ್ಯಕ್ಷ ನವಾಝ್ ಕಾಟಿಪಳ್ಳ, ಸೇವಾಂಜಲಿ ಟ್ರಸ್ಟ್‌ ಅಧ್ಯಕ್ಷೆ ರೇಷ್ಮಾ ಡಿಸೋಜ, ಸಾಮಾಜಿಕ ಕಾರ್ಯಕರ್ತೆ ಶಾಂತಿ ಡಿಸೋಜ, ಜೆಡಿಎಸ್ ಬ್ಲಾಕ್ ಪದಾಧಿಕಾರಿಗಳಾದ ಕಾಟಿಪಳ್ಳ ವಾರ್ಡ್‌ನ ಉಬೇದ್ ಹುಸೇನ್, ಎಂ.ಡಿ. ಖಾದರ್, ಅಬ್ದುಲ್ ರಹ್ಮಾನ್, ಜಂಶೀದ್, ಅಫ್ನಾನ್, ಹಸನಬ್ಬ ಹಾಗೂ ಇತರ ಪದಾಧಿಕಾರಿಗಳು ಇನಾಯತ್ ಅಲಿ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.

- Advertisement -

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಚಿತ್ರಾಪುರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮೇಯರ್‌ಗಳಾದ ಶಶಿಧರ್ ಹೆಗ್ಡೆ, ಮಹಾಬಲ ಮಾರ್ಲ, ಹರಿನಾಥ್, ಕವಿತಾ ಸನಿಲ್, ಗುಲ್ಝಾರ್ ಬಾನು, ಕಾರ್ಪೋರೇಟರ್ ಅನಿಲ್ ಕುಮಾರ್, ಮುಖಂಡರಾದ ಉಮೇಶ್ ದಂಡಕೇರಿ, ಶಶಿಕಲಾ ಪದ್ಮನಾಭ, ಸಮೀರ್ ಕಾಟಿಪಳ್ಳ, ಮಲ್ಲಿಕಾರ್ಜುನ, ರಾಜೇಶ್ ಕುಳಾಯಿ, ರೆಹಮಾನ್ ಕುಂಜತ್ತಬೈಲ್ ಮೊದಲಾದವರು ಉಪಸ್ಥಿತರಿದ್ದರು.

Join Whatsapp