ಕಲಬುರಗಿ: ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಹಿಂದೂ – ಮುಸ್ಲಿಂ ಎನ್ನುವ ಜಗಳವೇ ಬ್ಯಾನ್ ಆಗುತ್ತದೆ ಎಂದು ಜೆಡಿಎಸ್ ರಾಜ್ಯ ಅಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು.
ಅಫ್ಜಲ್ಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಹುರಿಯಾಳು ಶಿವಕುಮಾರ್ ನಾಟೀಕರ್ ಆರಂಭಿಸಿರುವ 500 ಕಿ.ಮೀ ಪಾದಯಾತ್ರೆಗೆ ಚಾಲನೆ ನೀಡುವ ಮುನ್ನ ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಪಿಎಫ್ಐ ಸಂಘಟನೆಯನ್ನು ಬ್ಯಾನ್ ಮಾಡಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, ಸಂಘಟನೆಯ ವಿರುದ್ಧ ಸರಿಯಾದ ದಾಖಲೆಗಳಿದ್ದರೆ ಬಂಧಿಸಿ ಜೈಲಿಗೆ ಹಾಕಿ. ಇಲ್ಲವೇ ಕ್ರಮ ಕೈಗೊಳ್ಳಿ ಅದನ್ನು ಬಿಟ್ಟು ಕೇವಲ ಸಂಘಟನೆಯನ್ನು ಬ್ಯಾನ್ ಮಾಡುವುದು, ಅದರ ಮುಖಂಡರನ್ನು ಹೆದರಿಸುವುದು, ಜೈಲಿಗಟ್ಟುವುದು ಪ್ರಜಾಪ್ರಭುತ್ವದ ಕತ್ತು ಹಿಸುಕಿದಂತೆ ಎಂದರು.
ನಮ್ಮ ಪಕ್ಷವನ್ನು ಅಧಿಕಾರಕ್ಕೆ ಬಂದರೆ ಇಂತಹ ಹಿಂದೂ- ಮುಸ್ಲಿಂ ಜಗಳಗಳನ್ನೇ ಬ್ಯಾನ್ ಮಾಡಲಾಗುವುದು ಎಂದು ತಿಳಿಸಿದರು.