ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜನತಾದಳ‌ ಅಭ್ಯರ್ಥಿಯಿಂದ ಜೆಪ್ಪು, ಬೋಳಾರ್ ನಗರದಲ್ಲಿ ಬಿರುಸಿನ‌ ಪ್ರಚಾರ

Prasthutha|

ಮಂಗಳೂರು: ಇಂದು ಮಂಗಳೂರು ದಕ್ಷಿಣ‌ ವಿಧಾನಸಭಾ ಕ್ಷೇತ್ರದ ಜನತಾದಳ ಅಭ್ಯರ್ಥಿ ಸುಮತಿ ಎಸ್ ಹೆಗ್ಡೆ‌ ಹಾಗೂ ಜಾತ್ಯಾತೀತ ಜನತಾದಳ‌ ಕಾರ್ಯಕರ್ತರು ಇಂದು ಮಂಗಳೂರು‌ ನಗರದ ಬೋಳಾರ, ಜೆಪ್ಪು ಪ್ರದೇಶದಲ್ಲಿ ಬಿರುಸಿನ ಮತಯಾಚನೆ ಮಾಡಿದರು.

- Advertisement -
‌‌‌‌      ಈ‌ ಸಂದರ್ಭ ರಾಜ್ಯ ಮೀನುಗಾರಿಕಾ ಅಧ್ಯಕ್ಷ ರತ್ನಾಕರ ಸುವರ್ಣ, ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ ಕುಮಾರ್ ವೈ, ಝಮೀರ್ ಶಾ, ದ.ಕ‌. ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ ರಮೀಝಾ‌ ನಾಸಿರ್, ಮಾಜಿ ರಾಜ್ಯ ಯುವ ಜನತಾದಳ ಕಾರ್ಯದರ್ಶಿ ಶ್ರೀನಾಥ್ ರೈ, ದ.ಕ.‌ಜಿಲ್ಲಾ ಜೆಡಿಎಸ್ ಮುಖಂಡ‌ ಜೀವನ್ ಪಾಲ್, ನಾಸಿರ್ ಬಂದರ್, ರಾಜ್ಯ ಕಾರ್ಯದರ್ಶಿ ಶ್ರೀ ಮಣಿ ಆರ್     ಶೆಟ್ಟಿ, ಶಾರದಾ ಶೆಟ್ಟಿ, ಮಂಗಳೂರು ದಕ್ಷಿಣ ಪ್ರ.ಕಾರ್ಯದರ್ಶಿ ಅಲ್ತಾಫ್ ತುಂಬೆ, ಪದಾಧಿಕಾರಿಗಳಾದ ಹಬೀಬ್ ಫಲ್ನೀರ್, ಲತೀಫ್ ಶಿವಭಾಗ್, ಶಫೀಕ್ ಆಲಡ್ಕ, ಪ್ರಿಯಾ ಸಾಲಿಯಾನ್,‌ ಕವಿತಾ ಹಾಗೂ ಹಲವರು ಉಪಸ್ಥಿತರಿದ್ದರು.


Join Whatsapp