ಬಿಜೆಪಿಯೊಂದಿಗೆ ಮೈತ್ರಿ ವಿಚಾರ | JDS ಜಾತ್ಯತೀತ ಅಲ್ಲವೆಂಬುದು ಸಾಬೀತಾಗಿದೆ: ಸಚಿವ ಸಂತೋಷ್​ ಲಾಡ್​

Prasthutha|

ಹುಬ್ಬಳ್ಳಿ: ಜೆಡಿಎಸ್​​, ಬಿಜೆಪಿ ಮೈತ್ರಿ ಬಹುತೇಕ ಪೂರ್ವ ನಿರ್ಧಾರ ಆಗಿತ್ತು. ಈ ಮೈತ್ರಿಯೊಂದಿಗೆ JDS ಜಾತ್ಯತೀತ ಅಲ್ಲ ಅನ್ನುವುದು ಸಾಬೀತು ಆಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್​ ಲಾಡ್​ ಹೇಳಿದ್ದಾರೆ.

- Advertisement -

 ನಗದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶ ಉಳಿವಿಗಾಗಿ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುತ್ತಿದ್ದೇವೆ ಅಂದರು. ಇಲ್ಲಿವರೆಗೂ ದೇಶ ಹಾಳಾಗಿತ್ತು ಅಂತಾನೇ ಅರ್ಥ ಅಲ್ಲವೇ. ಹಾಗಿದ್ದರೆ ಕಳೆದ 10 ವರ್ಷದಲ್ಲಿ ಅಧಿಕಾರದಲ್ಲಿ ಇದ್ದವರು ಯಾರು ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, ಇಲ್ಲಿವರೆಗೂ ಪ್ರಧಾನಿ ಮೋದಿ ಸರ್ಕಾರ ಅಂತಾನೆ ಬಿಂಬಿಸುತ್ತಾ ಬಂದರು. ಮೋದಿ ಸರ್ಕಾರ ಅಂತ ಪ್ರಚಾರ ಮಾಡಿದ್ದು ಇದೇ ಬಿಜೆಪಿ. ಮೇಕಿನ್​ ಇಂಡಿಯಾ, ಡಿಜಿಟಲ್ ಇಂಡಿಯಾ, ಶೈನಿಂಗ್ ಇಂಡಿಯಾ ಎಂಬಿತ್ಯಾದಿ ಇಂಡಿಯಾ ಪ್ರಮೋಟ್ ಮಾಡಿದ್ದು ಇವರೇ. ಈಗ ಭಾರತ ಪ್ರಮೋಟ್ ಮಾಡಲಿಕ್ಕೆ ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ.

- Advertisement -

ಪ್ರಧಾನಿ ಮೋದಿ ಅವರು ಪಾಪ್ಯುಲರ್ ಇದ್ದರೆ ಚುನಾವಣೆ ಬಂದಾಗ ಒಂದು ತಿಂಗಳು ಟಿವಿಯಲ್ಲಿ ಕಾಣಿಸಿಕೊಳ್ಳದಿರಲಿ. ಚುನಾವಣೆಯಲ್ಲಿ ಗೆದ್ದು ತೋರಿಸಲಿ. ಮೋದಿ ಅವರು ಮಾಡುತ್ತಿರುವ ಟ್ರಿಕ್ಸ್​ನಿಂದ ಮೋದಿ ಅವರಿಗೆ ಮತ್ತು ಬಿಜೆಪಿಗೆ ಲಾಭ ಆಗಿರಬಹುದು. ಆದರೆ ದೇಶಕ್ಕೆ ಒಂದು ರೂಪಾಯಿ ಲಾಭ ಆಗಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

Join Whatsapp