ಸೌದಿ ಅರೇಬಿಯಾ: ಜಾಝಾ ಸ್ಪೋರ್ಟ್ಸ್ ತೆಕ್ಕೆಗೆ ‘ಮಂಗಳೂರು ಬಿಗ್ ಬ್ಯಾಶ್-5’ ಪ್ರಶಸ್ತಿ

Prasthutha|

ಜೆದ್ದಾ: ‘ಮಂಗಳೂರು ಬಿಗ್ ಬ್ಯಾಶ್-5’ನೇ ಅಂಡರ್ ಆರ್ಮ್ ಕ್ರಿಕೆಟ್ ಸರಣಿ ಕೂಟದಲ್ಲಿ ಜಾಝಾ ಸ್ಪೋರ್ಟ್ಸ್ ಅಕಾಡೆಮಿಯು ಪ್ರಶಸ್ತಿ ತನ್ನದಾಗಿಸಿಕೊಂಡಿತು. ಫೈನಲ್ ಪಂದ್ಯದಲ್ಲಿ ಜಾಝಾ ಸ್ಪೋರ್ಟ್ಸ್ ಅಕಾಡೆಮಿ ತಂಡವು ಟಾರ್ಗೆಟ್ ಗೈಸ್ ತಂಡವನ್ನ 7 ರನ್ ಗಳಿಂದ ಮಣಿಸಿತು.


ಫೈನಲ್ ಪಂದ್ಯಕೂಟದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಜಾಝಾ ಸ್ಪೋರ್ಟ್ಸ್ ತಂಡವು ನಿಗದಿತ 4 ಓವರ್ ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 43 ರನ್ ಗಳಿಸಿ, ಟಾರ್ಗೆಟ್ ಗೈಸ್ ತಂಡಕ್ಕೆ 44 ರನ್ ಗಳ ಗುರಿ ನೀಡಿತು. ಆದರೆ ಟಾರ್ಗೆಟ್ ತಂಡವು 4 ವಿಕೆಟ್ ಗಳ ನಷ್ಟದೊಂದಿಗೆ ಕೇವಲ 36 ರನ್ ಗಳಿಸಲಷ್ಟೇ ಶಕ್ತವಾಯಿತು.

- Advertisement -


ಫೈನಲ್ ಪಂದ್ಯಕೂಟದ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಜಾಝಾ ಸ್ಪೋರ್ಟ್ಸ್ ತಂಡದ ಶಾನವಾಝ್ ಪಡೆದರು. ಅತ್ಯುತ್ತಮ ಬೌಲರ್ ಆಗಿ ಜಾಝಾ ಸ್ಪೋರ್ಟ್ಸ್ ತಂಡದ ಶಾಕಿರ್, ಅತ್ಯುತ್ತಮ ಬ್ಯಾಟ್ಸ್ ಮನ್ ಆಗಿ ಟಾರ್ಗೆಟ್ ತಂಡದ ರಹೀಂ ಹೊರ ಹೊಮ್ಮಿದರು. ಜಾಝಾ ಸ್ಪೋರ್ಟ್ಸ್ ತಂಡದ ಶಂಶುದ್ದೀನ್ ಬಂಟ್ವಾಳ ಸರಣಿ ಶ್ರೇಷ್ಠ ಹಾಗೂ ಮೊಹಮ್ಮದ್ ನೌಶಾದ್ ಎಮರ್ಜಿಂಗ್ ಪ್ಲೇಯರ್ ಪ್ರಶಸ್ತಿಗೆ ಭಾಜನರಾದರು.


ಇದಕ್ಕೂ ಮುನ್ನ ನಡೆದ ಸೆಮಿ ಫೈನಲ್ ಪಂದ್ಯಕೂಟದಲ್ಲಿ ಜಾಝಾ ಸ್ಪೋರ್ಟ್ಸ್ ತಂಡವು ತೋಡಾರ್ ಫ್ರೆಂಡ್ಸ್ ಹಾಗೂ ಟಾರ್ಗೆಟ್ ಗೈಸ್ ತಂಡವು ತಾಯಿಫ್ ಫೈಟರ್ಸ್ ತಂಡವನ್ನ ಮಣಿಸಿ ಫೈನಲ್ ಪ್ರವೇಶಿಸಿತು.

- Advertisement -