ರಾಷ್ಟ್ರೀಯ ಲೋಕ ದಳದ ಎಲ್ಲ ಘಟಕಗಳನ್ನು ವಿಸರ್ಜಿಸಿದ ಜಯಂತ್ ಚೌಧರಿ

Prasthutha|

ನವದೆಹಲಿ: ರಾಷ್ಟ್ರೀಯ ಲೋಕ ದಳದ ನಾಯಕ ಜಯಂತ್ ಸಿಂಗ್ ಚೌಧರಿಯವರು ತನ್ನ ರಾಷ್ಟ್ರೀಯ ಲೋಕ ದಳ ಪಕ್ಷದ ಎಲ್ಲ ಘಟಕಗಳನ್ನು ವಿಸರ್ಜಿಸಿದ್ದಾರೆ.

- Advertisement -

ಪಕ್ಷವನ್ನೂ ವಿಸರ್ಜಿಸಲಾಗಿದ್ದು, ಅದಕ್ಕೆ ಹೊಸ ರೂಪ ಕೊಡುವುದೇ, ಬರೇ ರೈತ ಹೋರಾಟಗಳಲ್ಲಿ ತೊಡಗಿಕೊಳ್ಳುವುದೇ ಎಂಬ ಬಗ್ಗೆ ಚಿಂತನೆ ನಡೆದಿದೆ ಎಂದು ಜಯಂತ್ ಚೌಧರಿ ಹೇಳಿದರು.

ದಿವಂಗತ ಪ್ರಧಾನಿ ಚರಣ್ ಸಿಂಗ್ ಲೋಕದಳವನ್ನು ಬಲವಾಗಿ ಕಟ್ಟಿದ್ದರು. ಆದರೆ ಅದು ದಶಕದಿಂದ ತೀರಾ ದುರ್ಬಲವಾಗಿದೆ.   ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ಆರ್ ಎಲ್ ಡಿ ಪಕ್ಷವು ಬರೇ  2.89% ಮತ ಪಡೆದು 8 ಸ್ಥಾನಗಳನ್ನು ಮಾತ್ರ ಗೆದ್ದಿದೆ. ಇದು ಜಯಂತ್ ಚೌಧರಿಯವರನ್ನು ಭ್ರಮನಿರಸನಗೊಳಿಸಿದೆ.

- Advertisement -

ಲಖಿಂಪುರ ಖೇರಿಯಲ್ಲಿ ರೈತರ ಕೊಲೆಗೈದ ಬಿಜೆಪಿ ಪಕ್ಷದ ಜೊತೆ ಸೇರುವ ಪ್ರಶ್ನೆಯೇ ಇಲ್ಲ. ನನ್ನ ಮುಂದಿನ ರಾಜಕೀಯ ನಡೆಯ ಬಗ್ಗೆ ಸ್ಪಷ್ಟ ತೀರ್ಮಾನಕ್ಕೆ ಸ್ವಲ್ಪ ಸಮಯ ಬೇಕು. ರೈತ ಪರ ಪಕ್ಷ ಇಲ್ಲವೇ ಹೋರಾಟ ಹೊರತು ಬೇರೆ ಆಯ್ಕೆ ಇಲ್ಲ ಎಂದೂ ಅವರು ಹೇಳಿದರು.



Join Whatsapp