ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿ ಜಯ್ ಶಾ ಮರು ಆಯ್ಕೆ

Prasthutha|

ಶ್ರೀಲಂಕಾ: ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಇದರ ಅಧ್ಯಕ್ಷರಾಗಿ ಜಯ್ ಶಾ ಮರು ಆಯ್ಕೆಯಾಗಿದ್ದಾರೆ. ಶ್ರೀಲಂಕಾದಲ್ಲಿ ಇಂದು ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಎಸಿಸಿ ಅಧ್ಯಕ್ಷರಾಗಿ ಪ್ರಸ್ತುತ ಬಿಸಿಸಿಐ ಕಾರ್ಯದರ್ಶಿಯಾಗಿರುವ ಜಯ್ ಶಾ ಅವರ ಅಧಿಕಾರಾವಧಿಯನ್ನು ಸರ್ವಾನುಮತದಿಂದ ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ.

- Advertisement -

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಜ್ಮುಲ್ ಹಸನ್ ಅವರಿಂದ ಎಸಿಸಿಯ ಅಧ್ಯಕ್ಷ ಪಟ್ಟವನ್ನು ಜಯ್ ಶಾ ಕಳೆದ 2020ರ ಜನವರಿಯಲ್ಲಿ ವಹಿಸಿಕೊಂಡಿದ್ದರು. ಶ್ರೀಲಂಕಾ ಕ್ರಿಕೆಟ್ ಅಧ್ಯಕ್ಷ ಶಮ್ಮಿ ಸಿಲ್ವಾ, ಶಾ ಅಧಿಕಾರ ವಿಸ್ತರಣೆಯನ್ನು ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ, ಅದರಂತೆ ಈ ನಾಮನಿರ್ದೇಶನವನ್ನು ಎಸಿಸಿಯ ಎಲ್ಲಾ ಸದಸ್ಯರು ಸರ್ವಾನುಮತದಿಂದ ಬೆಂಬಲಿಸಿದ್ದಾರೆ.

ಅಧ್ಯಕ್ಷರಾಗಿ ಮರು ಆಯ್ಕೆಯಾದ ನಂತರ ಪ್ರತಿಕ್ರಿಯಿಸಿರುವ ಜಯ್ ಶಾ, ನನ್ನ ಮೇಲೆ ನಂಬಿಕೆ ಇರಿಸಿ ಮತ್ತು ನಾವು ಪ್ರಾರಂಭಿಸಿದ ಎಲ್ಲಾ ಕೆಲಸವನ್ನು ಮುಂದುವರಿಸಲು ನಾನು ಅರ್ಹನೆಂದು ಪರಿಗಣಿಸಿದ್ದಕ್ಕಾಗಿ ಎಸಿಸಿಯಲ್ಲಿನ ನನ್ನ ಗೌರವಾನ್ವಿತ ಸಹೋದ್ಯೋಗಿಗಳಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

Join Whatsapp