ನವದೆಹಲಿ: ಸಿಸಿಐ ಕಾರ್ಯದರ್ಶಿ ಜಯ್ ಶಾ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಯ್ ಶಾ ಅವರಿಗೆ ಐಸಿಸಿ ಮಂಡಳಿಯಿಂದ ಭಾರಿ ಬೆಂಬಲ ಸಿಕ್ಕಿದ್ದು,16ರಲ್ಲಿ 15 ಸದಸ್ಯರು ಜಯ್ ಶಾ ಪರವಾಗಿದ್ದರು. ಇದರಿಂದಾಗಿ ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಆಯ್ಕೆ ಮೊದಲೇ ಖಚಿತವಾಗಿತ್ತು, ಅದು ಅಧಿಕೃತವಾಗಿದೆ. ನಾಮನಿರ್ದೇಶನ ಪ್ರಕ್ರಿಯೆಯು ಆಗಸ್ಟ್ 27 ರಂದು ಮುಕ್ತಾಯಗೊಂಡಿದ್ದು, ಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಅತ್ಯಂತ ಕಿರಿಯ ಎನ್ನುವ ಹೆಗ್ಗಳಿಕೆಗೆ ಜಯ್ ಶಾ ಪಾತ್ರವಾಗಿದ್ದಾರೆ.
ನವೆಂಬರ್ 2020 ರಿಂದ ಐಸಿಸಿ ಅಧ್ಯಕ್ಷರಾಗಿದ್ದ ಗ್ರೆಗ್ ಬಾರ್ಕ್ಲೇ ಅವರು ಮೂರನೇ ಅವಧಿಗೆ ಅಧ್ಯಕ್ಷರಾಗಿ ಮುಂದುವರೆಯದ ಕಾರಣ, ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ.