ದೇವಸ್ಥಾನಕ್ಕೆ ಕೃಷ್ಣನ ಚಿತ್ರ ರಚಿಸಿ ಕೊಟ್ಟ ಜಸ್ನಾ ಸಲೀಂ

Prasthutha|

ಕಲ್ಲಿಕೋಟೆ : ಕೇರಳದ ಮುಸ್ಲಿಂ ಯುವತಿ ಜಸ್ನಾ ಸಲೀಂ ಹೆಸರು ಕಳೆದ ಕೆಲ ವರ್ಷಗಳ ಹಿಂದೆ ಎಲ್ಲೆಡೆ ಕೇಳಿ ಬಂದಿತ್ತು. ಅದಕ್ಕೆ ಕಾರಣ ಅವರು ಬಿಡಿಸುತ್ತಿರುವ ಹಿಂದೂ ದೇವರ ಭಾವಚಿತ್ರಗಳ ಪೇಟಿಂಗ್. ಕಳೆದ 6 ವರ್ಷಗಳಲ್ಲಿ ಸುಮಾರು 500 ಕ್ಕೂ ಹೆಚ್ಚು ವಿವಿಧ ದೇವರ ಕಲಾಕೃತಿಗಳನ್ನು ಬಿಡಿಸಿದ್ದಾರೆ.

- Advertisement -

ತರಬೇತಿ ಪಡೆಯದೆ ಚಿತ್ರಕಲೆಯನ್ನು ಕರಗತ ಮಾಡಿಕೊಂಡಿರುವ ಜಸ್ನಾ ಅವರಲ್ಲಿ ಬಹುದಿನಗಳ ಆಸೆಯೊಂದಿತ್ತು. ತಾವು ಮಾಡಿದ ಕೃಷ್ಣನ ಪೇಟಿಂಗ್‍ ನ್ನು  ದೇವಸ್ಥಾನಕ್ಕೆ ನೀಡಬೇಕೆನ್ನುವುದು ಇವರ ಬಯಕೆಯಾಗಿತ್ತು. ಆದರೆ, ಕಾರಣಾಂತರಗಳಿಂದ ಇದು ಸಾಧ್ಯವಾಗಿರಲಿಲ್ಲ. ಇದೀಗ ಕಾಲ ಕೂಡಿ ಬಂದಿದ್ದು ಭಾನುವಾರ ಉಲನಾಡು ಗ್ರಾಮದ ಶ್ರೀಕೃಷ್ಣದೇವಸ್ಥಾನಕ್ಕೆ ತನ್ನ ಕಲಾಕೃತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಈ ಬಗ್ಗೆ ಸಂತಸ ಹಂಚಿಕೊಂಡಿರುವ ಜಸ್ನಾ, ಶ್ರೀಕೃಷ್ಣನ ಮೂರ್ತಿಯನ್ನು ಕಣ್ತುಂಬಿಕೊಳ್ಳುವುದು ಮತ್ತು ಆ ದೇವರ ಮುಂದೆ ನನ್ನ ವರ್ಣಚಿತ್ರವನ್ನು ಉಡುಗೊರೆಯಾಗಿ ನೀಡುವುದು ನನ್ನ ದೊಡ್ಡ ಕನಸಾಗಿತ್ತು. ನನ್ನ ಕನಸು ನನಸಾಗಿದ್ದಕ್ಕೆ ತುಂಬಾ ಸಂತೋಷವಾಯಿತು ಎಂದು ಹೇಳಿದ್ದಾರೆ.



Join Whatsapp