ಜಪ್ಪಿನಮೊಗರು | ಸರಣಿ ಅಪಘಾತ: ಕಾರು ಚಾಲಕ ಅಪಾಯದಿಂದ ಪಾರು

Prasthutha|

ಉಳ್ಳಾಲ: ಕಾರು ಚಾಲಕನೋರ್ವ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಸರಣಿ ಅಪಘಾತ ಸಂಭವಿಸಿದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಜಪ್ಪಿನ ಮೊಗರು ಗ್ಯಾರೇಜ್ ಬಳಿ ನಡೆದಿದೆ.

- Advertisement -

ಕಾರು, ಲಾರಿ, ಬಸ್ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾನೆ.


ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕಾರು ಚಾಲಕ ಹಠಾತ್ ಬ್ರೇಕ್ ಹಾಕಿದ್ದಾರೆ. ಪರಿಣಾಮ ಹಿಂಬದಿಯಲ್ಲಿದ್ದ ಲಾರಿ ಕಾರಿಗೆ ಢಿಕ್ಕಿ ಹೊಡೆದಿದೆ. ಅದರ ಹಿಂಭಾಗದಲ್ಲಿದ್ದ ಬಸ್ಸು ಕಾರಿಗೆ ಢಿಕ್ಕಿ ಹೊಡೆದ ಕಾರಣ ಘಟನೆ ಸಂಭವಿಸಿದೆ.

Join Whatsapp