ಬೆಂಗಳೂರು: ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ದಿನನಿತ್ಯದ ಅವಶ್ಯಕ ವಸ್ತುಗಳ ಬೆಲೆಯೇರಿಕೆಯ ವಿರುದ್ಧ ದ್ವಿಚಕ್ರವಾಹನವನ್ನು “ಅಣಕು ಒಂಟಿ ಶವ” ದಂತೆ ರೂಪಿಸಿ ಜನತಾ ಪಾರ್ಟಿ ಕರ್ನಾಟಕ ಘಟಕ ಪ್ರತಿಭಟನೆ ನಡೆಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಜನತಾ ಪಾರ್ಟಿ ಅಧ್ಯಕ್ಷರಾದ ನಾಗೇಶ್ ಎನ್, ಪ್ರಸ್ತುತ ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಸಾಮಾನ್ಯ ಜನರ ದಿನನಿತ್ಯದ ಅವಶ್ಯಕ ವಸ್ತುಗಳ ಬೆಲೆಯು ಗಗನಕ್ಕೇರಿದ್ದು, ಮಧ್ಯಮ ಹಾಗೂ ಕೆಳಮಧ್ಯಮ ವರ್ಗದ ಬದುಕು ದುಸ್ತವಾಗಿರುವುದನ್ನು ಕಾಣುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇವೆಲ್ಲ ಸಮಸ್ಯೆಗಳಿಗೆ ದೂರಗಾಮಿ ಚಿಂತನೆಗಳಿಲ್ಲದ ಕೇಂದ್ರ ಹಾಗೂ ರಾಜ್ಯಗಳ ಆಡಳಿತಾರೂಢರ ಧೋರಣೆಯೇ ಕಾರಣವಾಗಿದೆ. ಪ್ರಸ್ತುತ ಕೇಂದ್ರ ಸರ್ಕಾರವು ಕಳೆದ18 ತಿಂಗಳಿನಿಂದ ನಿರತವಾಗಿ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಏರಿಕೆಯಾಗಿದೆ ,ಇದರ ಪ್ರಯುಕ್ತ ಅವಶ್ಯಕ ವಸ್ತುಗಳ ಬೆಲೆಯನ್ನು ತನ್ನಷ್ಟಕ್ಕೆ ತಾನೇ ಪ್ರತಿನಿತ್ಯ ಏರಿಸುತ್ತಿರುವುದು ಪರಿಣಾಮವಾಗಿ ” ಉಪ್ಪಿನಿಂದ ಮೊದಲ್ಗೊಂಡು ” ಎಲ್ಲಾ ಅಗತ್ಯ ವಸ್ತುಗಳ ಬೆಲೆಯೇರಿಕೆಯಾಗಿ ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನಾದರೂ ಸಹ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮುಂತಾದವುಗಳನ್ನು ಜಿ.ಎಸ್.ಟಿ. ವ್ಯಾಪ್ತಿಗೆ ಒಳಪಡಿಸುವಂತೆ ಅವರು ಒತ್ತಾಯಿಸಿದ್ದಾರೆ.
ಇದೇ ಸಂದರ್ಭದಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಅಭಿಷೇಕ, ಮಂಜುನಾಥ್ ,ಭಾಸ್ಕರ್ , ನಾಗರಾಜ , ಇನ್ನೂ ಮುಂತಾದ ಮುಖಂಡರು ಭಾಗವಹಿಸಿದ್ದರು