ಬೆಂಗಳೂರು: ನ್ಯಾಯವಾದಿ ಕೆ.ಎನ್.ಜಗದೀಶ್ ಕುಮಾರ್ ಅಧಿಕೃತವಾಗಿ ಜನತಾ ಪಾರ್ಟಿ ಕರ್ನಾಟಕ ರಾಜ್ಯ ಪಕ್ಷಕ್ಕೆ ಸೇರ್ಪಡೆಯಾದ್ದಾರೆ.
ರವಿವಾರ ಮಾಜಿ ಸಚಿವೆ ಹಾಗೂ ಪಾರ್ಟಿಯ ಅಧ್ಯಕ್ಷೆಯಾದ ಬಿ.ಟಿ.ಲಲಿತಾ ನಾಯ್ಕ ಅವರ ಸಮ್ಮುಖದಲ್ಲಿ ಜಗದೀಶ್ ಜನತಾ ಪಾರ್ಟಿಗೆ ಸೇರ್ಪಡೆಯಾದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಪಕ್ಷದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಎನ್.ನಾಗೇಶ್, ಹೋರಾಟದ ಮೂಲಕವೇ ಬಂದಿರುವ ಜಗದೀಶ್ ಅವರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಸಂತಸದ ಸಂಗತಿ ಎಂದರು.